ಮಹಾಶಿವರಾತ್ರಿ ಉತ್ಸವ ಶಿವಭಕ್ತರಿಗೆ ಬಹುಮುಖ್ಯವಾದದ್ದು. ಶಿವರಾತ್ರಿಯಂದು ಮನಸ್ಸಿಟ್ಟು ಶಿವನ ಆರಾಧನೆ ಮಾಡಿದ್ರೆ ಮನೋಕಾಮನೆಗಳೆಲ್ಲ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ.
ಪೂಜೆ ಮಾಡುವ ವೇಳೆ ಅಪ್ಪಿತಪ್ಪಿ ತಪ್ಪಾದ್ರೂ ಈಶ್ವರ ಮುನಿಸಿಕೊಳ್ತಾನೆ. ಶಿವ ಪುರಾಣದಲ್ಲಿ ಶಿವ ಪೂಜೆ ಮಾಡುವ ವೇಳೆ ಯಾವ ಕೆಲಸ ಮಾಡಬಾರದು ಎಂಬುದನ್ನು ಹೇಳಲಾಗಿದೆ.
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಭಗವಂತ ವಿಷ್ಣುವಿಗೆ ತುಳಸಿ ಪ್ರಿಯವಾದದ್ದು. ವಿಷ್ಣು ಪೂಜೆಗೆ ತುಳಸಿಯನ್ನು ಅವಶ್ಯವಾಗಿ ಬಳಸಬೇಕು. ಆದ್ರೆ ಶಿವ ಪುರಾಣದ ಪ್ರಕಾರ ಶಿವನ ಪೂಜೆಗೆ ತುಳಸಿ ಬಳಸಬಾರದು.
ಶಿವನ ಪೂಜೆಗೆ ಅರಿಶಿನ ನಿಷಿದ್ಧ. ಮಹಾ ಶಿವರಾತ್ರಿಯಂದು ಮರೆತೂ ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸಬೇಡಿ.
ಶಿವರಾತ್ರಿಯಂದು ಸರಳ ಆಹಾರ ಸೇವನೆ ಮಾಡಬೇಕು. ಮಾಂಸಹಾರ ಸೇವನೆ ಮಾಡಬಾರದು. ಅಂದು ಪ್ರಾಣಿ ಹತ್ಯೆ ಮಹಾಪಾಪ.
ಶಿವರಾತ್ರಿಯಂದು ವಿನಾ ಕಾರಣಕ್ಕೆ ಕೋಪ ಮಾಡಿಕೊಳ್ಳಬಾರದು. ಶಾಸ್ತ್ರದಲ್ಲಿ ಹೇಳಿದ ವಸ್ತುಗಳನ್ನು ಶಿವನ ಪೂಜೆಗೆ ಬಳಸಬೇಕು.