alex Certify ಶಿವಮೊಗ್ಗ ಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ ಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಖಾಲಿ ಇರುವ 98 ವಿವಿಧ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ಇಲ್ಲಿದೆ.

ಆಪ್ತ ಸಹಾಯಕರು/ಶೀಘ್ರಲಿಪಿಗಾರರು ಒಂದು ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ವೇತನ ಶ್ರೇಣಿ 33,450-62,600 ರೂಪಾಯಿಗಳೆಂದು ತಿಳಿಸಲಾಗಿದೆ. ಇನ್ನು ಕಿರಿಯ ಸಹಾಯಕರು/ಕ್ಷೇತ್ರ ಅಧಿಕಾರಿಗಳು/ನಗದು ಗುಮಾಸ್ತರು 73 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ವೇತನ ಶ್ರೇಣಿ 30,350-58,520 ಎಂದು ತಿಳಿಸಲಾಗಿದೆ.

ಇನ್ನು ವಾಹನ ಚಾಲಕರು ಒಂದು ಹುದ್ದೆ ಇದ್ದು, ವೇತನ ಶ್ರೇಣಿ 27,650-52,650 ಎಂದು ತಿಳಿಸಲಾಗಿದೆ. 22 ಅಟೆಂಡರ್ಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ವೇತನ ಶ್ರೇಣಿ 23,500-47,650 ರೂಪಾಯಿಗಳಾಗಿದೆ. ಜಲಗಾರರು ಒಂದು ಹುದ್ದೆಗೆ ನೇಮಕಾತಿ ನಡೆಯಲಿದ್ದು, ವೇತನ ಶ್ರೇಣಿ 17,000-28,950 ರೂಪಾಯಿಗಳಾಗಿದೆ.

ಈ ಹಿಂದೆ ಅರ್ಜಿ ಸಲ್ಲಿಸಿ ಬ್ಯಾಂಕಿನಿಂದ ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರ ಸ್ವೀಕರಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹಿಂದಿನ ಅರ್ಜಿಗಳನ್ನೇ ಪರಿಗಣಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಮೇ 16 ರ ಸಂಜೆ 5:30 ಗಂಟೆ ಒಳಗಾಗಿ ಅಂಚೆ ಕೊರಿಯರ್ ಮುಖಾಂತರ ಅಥವಾ ಖುದ್ದಾಗಿ ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯ ನಿರ್ವಾಹಕರು, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬಾಲರಾಜ್ ಅರಸ್ ರಸ್ತೆ, ಪಿ.ಬಿ. ನಂಬರ್ 62 ಶಿವಮೊಗ್ಗ-577201 ಇಲ್ಲಿಗೆ ಕಳಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ www.shimogadccbank.com ಇಲ್ಲಿ ಪಡೆಯಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...