ಶಿವಮೊಗ್ಗ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೆಲವು ಪ್ರದೇಶದಲ್ಲಿ ಮನೆಗಳು ಹಾನಿಗೀಡಾಗಿವೆ.
ಪಾಲಿಕೆಯ ವತಿಯಿಂದ ತುರ್ತು ಪರಿಹಾರ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಯಡಿಯಲ್ಲಿ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಇಂದು ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದಾಗಿ ಜೆಸಿಬಿ ಯಂತ್ರ ಬಳಕೆಯಿಂದ ಮರಗಳ ಬೇರುಗಳು ನಾಶವಾಗಿದ್ದು, ಹಲವೆಡೆ ಮರಗಳು ನೆಲಕ್ಕುರುಳುತ್ತಿವೆ. ಈ ರೀತಿಯ ತುರ್ತು ಸಂದರ್ಭಗಳಲ್ಲಿ ನಾಗರೀಕರ ಸಮಸ್ಯೆಗಳ ಪರಿಹಾರಕ್ಕಾಗಿ 24X7 ಸಹಾಯವಾಣಿ ಪ್ರಾರಂಭಿಸುವುದು. ಸಂಬಂಧಪಟ್ಟ ವಾರ್ಡ್ ಗಳ ಕಂದಾಯ ನಿರೀಕ್ಷಕರ ಆರೋಗ್ಯ ನಿರೀಕ್ಷಕರ ಎಂಜಿನಿಯರ್ ಗಳನ್ನು ಒಳಗೊಂಡಂತೆ ಕಾರ್ಯಪಡೆಯನ್ನು ಕೂಡಲೇ ರಚಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ರಮೇಶ್ ಹೆಗಡೆ, ಕಾಂಗ್ರೆಸ್ ಮುಖಂಡ ರಂಗೇಗೌಡ ಉಪಸ್ಥಿತರಿದ್ದರು.