ನಾಡಿನ ಹೆಮ್ಮೆಯ ಕಿತ್ತೂರು ಸಾಮ್ರಾಜ್ಯದ ವೀರವನಿತೆ “ರಾಣಿ ಚೆನ್ನಮ್ಮ” ತನ್ನ ವೀರತ್ವದ ಹೋರಾಟದ ಮೂಲಕ ಬ್ರಿಟಿಷರ ಜಂಘಾಬಲ ಅಡಗಿಸಿದ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿಯ ಇತಿಹಾಸ ಜಗತ್ತಿಗೆ ಪ್ರಚುರಪಡಿಸಲು ರಾಜ್ಯ ಸರ್ಕಾರ ಅದ್ದೂರಿಯಾಗಿ ನಡೆಸಲು ಉದ್ದೇಶಿಸಿರುವ ಐತಿಹಾಸಿಕ “ಕಿತ್ತೂರು ಉತ್ಸವ-2022” ರ ಅಂಗವಾಗಿ ರಾಜ್ಯದಾದ್ಯಂತ ವೀರಜ್ಯೋತಿ ಯಾತ್ರೆಯು ತೆರಳುತ್ತಿದೆ.
ಇಂದು ರಾಜ “ಶಿವಪ್ಪ ನಾಯಕ” ನ ಕರ್ಮಭೂಮಿಯಾದ ಶಿವಮೊಗ್ಗಕ್ಕೆ “ವೀರ ಜ್ಯೋತಿ” ಯು ಆಗಮಿಸಿದ ಸಂದರ್ಭದಲ್ಲಿ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ವೀರಶೈವ ಸಮಾಜದ ಪ್ರಮುಖರು ಮತ್ತು ಜಿಲ್ಲಾಡಳಿತದಿಂದ ಜ್ಯೋತಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಮುಂದಿನ ಜಿಲ್ಲೆಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಸೂಡಾದ ನಿಕಟ ಪೂರ್ವ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಮಾಜಿ ಶಾಸಕ ಚಂದ್ರಶೇಖರಪ್ಪ, ಅಖಿಲ ಭಾರತ ವೀರಶೈವ ಲಿ೦ಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್, ಮಹೇಶ್ವರಪ್ಪ, ಉಮಾಶಂಕರ್, ಕುಮಾರ್, ಪರಮೇಶಪ್ಪ, ಜಯ್ಯಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಮೊದಲಾದವರಿದ್ದರು.