ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಲಾಗಿದ್ದು ಅವರನ್ನು ಈಗ ಸೆಪ್ಟೆಂಬರ್ 14 ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಇದರ ಮಧ್ಯೆ ಮುರುಘಾ ಮಠದಲ್ಲಿ ಈ ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದ ಮಾಸಿಕ ಸಾಮೂಹಿಕ ವಿವಾಹ ಸಮಾರಂಭ ಶಿವಮೂರ್ತಿ ಶರಣರ ಅನುಪಸ್ಥಿತಿ ಮಧ್ಯೆಯೂ ನಡೆದಿದ್ದು, ಆರು ಜೋಡಿಗಳು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.
ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಈ ಮಾಸಿಕ ಸಾಮೂಹಿಕ ವಿವಾಹ ಸಮಾರಂಭ ನಡೆದಿದ್ದು, ಏಳು ಜೋಡಿಗಳು ವಿವಾಹಕ್ಕೆ ನೋಂದಣಿ ಮಾಡಿಸಿದ್ದರೂ ಸಹ ಒಂದು ಜೋಡಿ ಕೊನೆ ಗಳಿಗೆಯಲ್ಲಿ ಬರಲಿಲ್ಲ ಎಂದು ಹೇಳಲಾಗಿದೆ.