ಭಗವಂತ ಶಿವ ಬಿಲ್ವಪತ್ರೆ ಪ್ರಿಯ. ಶಿವನಿಗೆ ಬಿಲ್ವಪತ್ರೆ ಅರ್ಪಿಸಲಾಗುತ್ತದೆ. ಶಿವನ ದೇವಾಲಯದ ಬಳಿ ಬಿಲ್ವಪತ್ರೆ ಗಿಡ ಸಾಮಾನ್ಯವಾಗಿರುತ್ತದೆ. ಬಿಲ್ವ ಪತ್ರೆ ಎಲೆ ಹಾಗೂ ಮರದ ಜೊತೆ ಬೇರಿಗೂ ಮಹತ್ವದ ಸ್ಥಾನವಿದೆ. ಬಿಲ್ವಪತ್ರೆ ಗಿಡದ ಬೇರನ್ನು ಔಷಧಿ ರೂಪದಲ್ಲೂ ಬಳಸಲಾಗುತ್ತದೆ.
ಬಿಲ್ವಪತ್ರೆ ವೃಕ್ಷವನ್ನು ಶ್ರೀವೃಕ್ಷವೆಂದು ಕರೆಯಲಾಗುತ್ತದೆ. ಈ ಮರದ ಮೂಲವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಮರದಲ್ಲಿ ತಾಯಿ ಲಕ್ಷ್ಮಿ ವಾಸವಾಗುತ್ತಾಳೆ.
ಬಿಲ್ವಪತ್ರೆ ಮರದ ಕೆಳಗೆ ತುಪ್ಪದ ಅನ್ನ, ತುಪ್ಪ ಅಥವಾ ಸಿಹಿ ದಾನ ಮಾಡಿದ್ರೆ ಎಂದೂ ಬಡತನ ಹತ್ತಿರ ಸುಳಿಯುವುದಿಲ್ಲ.
ಬಿಲ್ವಪತ್ರೆ ಬೇರನ್ನು ಪೂಜೆ ಮಾಡುವುದ್ರಿಂದ ಎಲ್ಲ ಪಾಪಗಳಿಗೆ ಮುಕ್ತಿ ಸಿಗುತ್ತದೆ. ಶಿವನ ಕೃಪೆ ಲಭಿಸುತ್ತದೆ.
ಸಂತಾನ ಪ್ರಾಪ್ತಿಗೆ ಹೂವು, ಗಂಧ, ಸುಗಂಧ ಹಾಗೂ ಬಿಲ್ವ ಪತ್ರೆಯನ್ನು ಹಾಕಿ ಬಿಲ್ವಪತ್ರೆ ಗಿಡವನ್ನು ಪೂಜಿಸಬೇಕು. ಇದ್ರಿಂದ ಸಂತಾನ ಸುಖ ಪ್ರಾಪ್ತಿಯಾಗುತ್ತದೆ.
ಬಿಲ್ವಪತ್ರೆ ಬೇರಿನ ನೀರನ್ನು ಹಣೆಗೆ ಹಾಕಿಕೊಳ್ಳುವುದ್ರಿಂದ ತೀರ್ಥಯಾತ್ರೆಯ ಪುಣ್ಯ ಪ್ರಾಪ್ತಿಯಾಗುತ್ತದೆ.