
ಊರೂರು ಸುತ್ತಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬುದು ಅನೇಕರ ಕನಸು. ಮಕ್ಕಳಿಗೆ ರಜೆ ಶುರುವಾಗ್ತಾ ಇದ್ದಂತೆ ಟೂರ್ ಹೊರಡುವವರು ಅನೇಕರಿದ್ದಾರೆ. ಮತ್ತೆ ಕೆಲವರಿಗೆ ಜಂಜಾಟವಿಲ್ಲ. ಕೆಲಸಕ್ಕೆ ಬಿಡುವು ಸಿಕ್ಕಾಗ ಪ್ರವಾಸಕ್ಕೆ ಹೊರಡಲು ಬ್ಯಾಗ್ ಪ್ಯಾಕ್ ಮಾಡ್ತಾರೆ. ಊರು ಸುತ್ತುವ ಆಸೆ ನಿಮಗೂ ಇದ್ದರೆ ಭಾರತದ ಈ ಪ್ರದೇಶಕ್ಕೊಮ್ಮೆ ಹೋಗಿ ಬನ್ನಿ.
ಕುಟುಂಬದವರ ಜೊತೆ ಸುತ್ತಾಡಲು ಬಯಸಿದ್ದರೆ ಮೇಘಾಲಯ ಬೆಸ್ಟ್ ಪ್ಲೇಸ್. ಅಲ್ಲಿನ ರಾಜಧಾನಿ ಶಿಲ್ಲಾಂಗ್ ನೋಡಲು ಸುಂದರವಾಗಿದೆ. ಇಲ್ಲಿನ ಬೆಟ್ಟಗಳು ಸ್ಕಾಟ್ಲೆಂಡ್ ನೆನಪು ಮಾಡುತ್ತದೆ. ಹಾಗಾಗಿ ಇದನ್ನು ಭಾರತದ ಸ್ಕಾಟ್ಲೆಂಡ್ ಎಂದೇ ಕರೆಯುತ್ತಾರೆ.
ವಾರ್ಡ್ ಲೇಕ್, ಎಲಿಫೆಂಟ್ ಫಾಲ್ಸ್, ಲೇಡಿ ಹೈದರಿ ಪಾರ್ಕ್ ಸೇರಿದಂತೆ ಇಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಉಮಿಯಮ್ ಲೇಕ್ ಪ್ರಸಿದ್ಧ ಪ್ರವಾಸಿ ಸ್ಥಳ. ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಮೇಘಾಲಯ ಭಾರತದ ಅತ್ಯಂತ ಚಿಕ್ಕ ರಾಜ್ಯವಾಗಿದ್ದು, 4,908 ಅಡಿ ಎತ್ತರದಲ್ಲಿದೆ. ಒಂದು ವೇಳೆ ನೀವು ಮೇಘಾಲಯಕ್ಕೆ ಹೋದ್ರೆ ಶಿಲ್ಲಾಂಗ್ ಗಾಲ್ಫ್ ಕೋರ್ಸ್, ಡಬಲ್ ಡೆಕ್ಕರ್ ರೂಟ್ ಬ್ರಿಡ್ಜ್ ಗೆ ಮರೆಯದೆ ಹೋಗಿ ಬನ್ನಿ.