ಮುಂಬೈ: ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ತೆರಿಗೆ ವಿಚಾರ ಸುದ್ದಿಯಾಗಿತ್ತು. ಈ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಆದರೆ ಇದೀಗ ಬಿಗ್ ರಿಲೀಫ್ ಸಿಕ್ಕಿದ್ದು, ಮೂರು ವರ್ಷದ ತೆರಿಗೆಯಲ್ಲಿ ವಿನಾಯ್ತಿ ಸಿಕ್ಕಿದೆ. ಇದರಿಂದ ನೂರಾರು ಕೋಟಿ ಹಣ ದೇವಸ್ಥಾನಕ್ಕೆ ಉಳಿದಂತಾಗಿದೆ.
ಹೌದು, 2015-16ನೇ ಸಾಲಿನ ತೆರಿಗೆ ಎಷ್ಟು ಎಂದು ನೋಡಿದಾಗ 183 ಕೋಟಿ ಎಂದು ಹೇಳಲಾಗಿತ್ತು. ಈ ತೆರಿಗೆ ಕಟ್ಟಲೇ ಬೇಕು ಎಂಬುದನ್ನು ಆದಾಯ ತೆರಿಗೆ ಇಲಾಖೆಯ ತಿಳಿಸಿತ್ತು.
ಶ್ರೀ ಸಾಯಿಬಾಬಾ ಸಂಸ್ಥಾನವು ಧಾರ್ಮಿಕ ಟ್ರಸ್ಟ್ ಅಲ್ಲ, ಚಾರಿಟಬಲ್ ಟ್ರಸ್ಟ್. ಹೀಗಾಗಿ ದೇಣಿಗೆ ಪೆಟ್ಟಿಗೆಯಲ್ಲಿ ಪಡೆದ ದೇಣಿಗೆಗೆ ಶೇಕಡಾ 30 ರಷ್ಟು ಆದಾಯ ತೆರಿಗೆ ವಿಧಿಸಬೇಕು. ಒಟ್ಟು ಮೊತ್ತ 183 ಕೋಟಿ ರೂಪಾಯಿ ತೆರಿಗೆ ಪಾವತಿಗೆ ಸೂಚನೆ ನೀಡಲಾಗಿತ್ತು.
ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಟ್ರಸ್ಟ್ ಗೆ ಇದೀಗ ಜಯ ಸಿಕ್ಕಿದೆ. ಶ್ರೀ ಸಾಯಿಬಾಬಾ ಸಂಸ್ಥಾನವನ್ನು ಧಾರ್ಮಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಎಂದು ಪರಿಗಣಿಸಿದ ಕೋರ್ಟ್ ಆದೇಶ ನೀಡಿದೆ. ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಕಳೆದ ಮೂರು ವರ್ಷಗಳಲ್ಲಿ ವಿಧಿಸಲಾಗಿದ್ದ 175 ಕೋಟಿ ರೂಪಾಯಿ ತೆರಿಗೆಗೆ ವಿನಾಯಿತಿ ಸಿಕ್ಕಿದೆ.