ಮಕ್ಕಳು ಏನು ಮಾಡಿದ್ರೂ ಚಂದ….. ಮಕ್ಕಳ ಮಾತು, ನಗು, ಡ್ಯಾನ್ಸ್ ಹೀಗೆ ಅವರೇನೇ ಮಾಡಿದ್ರೂ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಇತ್ತೀಚೆಗಿನ ಮಕ್ಕಳಂತೂ ತುಂಬಾನೇ ಫಾಸ್ಟ್. ಬಹಳ ಚುರುಕಾಗಿರುತ್ತಾರೆ.
ಯಾರಾದ್ರೂ ಮಾತನಾಡುವುದನ್ನು ಮಕ್ಕಳೇನಾದ್ರೂ ಕೇಳಿಸಿಕೊಂಡ್ರೆ, ಇದ್ದಿದ್ದನ್ನು ಇದ್ದ ಹಾಗೆಯೇ ಹೇಳಿ ಬಿಡುತ್ತಾರೆ. ಇದೀಗ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಪುಟ್ಟ ಬಾಲೆ ತನ್ನ ಮುದ್ದಾದ ಭಾಷೆಯಲ್ಲಿ ಶಿಕ್ಷಕಿಗೇ ಧಮ್ಕಿ ಹಾಕಿದ್ದಾಳೆ..!
ಹೌದು, ಪುಟ್ಟ ಬಾಲಕಿಯೊಬ್ಬಳು ತರಗತಿಯಲ್ಲಿ ತನ್ನ ಟೀಚರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ತನಗೆ ರೆಸ್ಪೆಕ್ಟ್ ಕೊಟ್ಟಿಲ್ಲ ಅಂತಾ ದಬಾಯಿಸಿದ್ದಾಳೆ. ಟೀಚರಮ್ಮ ಎಷ್ಟು ಹೇಳಿದ್ರೂ ಕೇಳದ ಮಗುವಿಗೆ ತಾನು ಕೋಲು ತೆಗೆದುಕೊಂಡು ಹೊಡೆಯಬೇಕಾ ಅಂತಾ ಕೇಳಿದ್ದಾರೆ. ಇದರಿಂದ ಬೆದರಿದ ಬಾಲೆ, ತನಗೆ ಹೊಡೆದ್ರೆ ಬೇರೆ ಮಕ್ಕಳಿಗೆ ಹೊಡೆಯುವುದಾಗಿ ಹೇಳಿದ್ದಾಳೆ.
ಮಗುವನ್ನು ಸಂತೈಸುವಲ್ಲಿ ಟೀಚರಮ್ಮ ಮಾತ್ರ ಫುಲ್ ಸುಸ್ತು ಆಗಿದಂತಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಕೆಲವರು ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ರೆ, ಇನ್ನು ಕೆಲವರು ನೆಗೆಟಿವ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ತಮಾಷೆಯಾಗಿ ನೋಡಿದ್ದು, ಹಾಸ್ಯ ಚಟಾಕಿ ಹಾರಿಸಿದ್ದಾರೆ.
https://www.youtube.com/watch?v=hZ86dcnBPLc&feature=youtu.be