ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ‘ಶಿಕ್ಷಕ ಮಿತ್ರ’ ಸಾಫ್ಟ್ ವೇರ್ ಹೆಸರನ್ನು ‘ಸೇವಾ ಮಿತ್ರ’ ಎಂದು ಬದಲಾವಣೆ ಮಾಡಿದೆ.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಿರ್ದೇಶಕಿ ಸಿಂಧು ಬಿ. ರೂಪೇಶ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬೋಧಕರು, ಬೋಧಕೇತರ ಸಿಬ್ಬಂದಿ, ಜಿಲ್ಲಾ ಉಪ ನಿರ್ದೇಶಕರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವ್ಯಕ್ತಿ ಸಂಬಂಧಿತ ಸೇವೆಗಳನ್ನು ಆನ್ಲೈನ್ ಮೂಲಕ ಪಡೆಯಲು ಶಿಕ್ಷಕ ಮಿತ್ರ ತಂತ್ರಾಂಶ ಬಳಸಲಾಗುತ್ತಿದೆ.
ಈ ತಂತ್ರಾಂಶದಲ್ಲಿ ಬೋಧಕರು ಮತ್ತು ಬೋಧಕೇತರರಿಗೆ ಸೇವಾ ಸೌಲಭ್ಯಗಳನ್ನು ಒದಗಿಸುವ ಕಾರಣ ಶಿಕ್ಷಕ ಮಿತ್ರ ಹೆಸರನ್ನು ಸೇವಾ ಮಿತ್ರ ಎಂದು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.