ಜ್ಯೋತಿಷ್ಯ ಶಾಸ್ತ್ರದಲ್ಲಿ ಮಧ್ಯಾಹ್ನದ ಸಮಯದಲ್ಲಿ ಕೆಲವು ಕೆಲಸ ಮಾಡಬಾರದು ಎನ್ನಲಾಗಿದೆ. ಈ ಕೆಲಸಗಳನ್ನು ಮಾಡುವುದ್ರಿಂದ ಲಕ್ಷ್ಮಿ ದೂರವಾಗುವ ಜೊತೆಗೆ ಸನ್ಮಾನ, ಗೌರವಕ್ಕೂ ಧಕ್ಕೆಯಾಗುತ್ತದೆ.
ಶಾಸ್ತ್ರಗಳ ಪ್ರಕಾರ ಮಧ್ಯಾಹ್ನ ಸೂರ್ಯನಿಗೆ ನೀರನ್ನು ಅರ್ಪಿಸಬಾರದು. ಇದ್ರಿಂದ ಸೂರ್ಯನ ಶುಭ ಫಲ ನಿಮಗೆ ಸಿಗುವುದಿಲ್ಲ. ರೋಗ, ಧನ ಸಂಪತ್ತಿನ ಕೊರತೆ, ಸರ್ಕಾರದಿಂದ ಸಿಗುವ ಲಾಭ ಕೂಡ ಕೈತಪ್ಪಿ ಹೋಗುತ್ತದೆ. ಹಾಗಾಗಿ ಸೂರ್ಯೋದಯದ ಸಮಯದಲ್ಲಿ ಮಾತ್ರ ಜಲ ಅರ್ಪಿಸಬೇಕು.
ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಅಶುಭ. ಇದ್ರಿಂದ ದೇವಿ ಲಕ್ಷ್ಮಿ ಮುನಿಸಿಕೊಳ್ತಾಳೆ. ಆಯಸ್ಸು ಕಡಿಮೆಯಾಗುತ್ತದೆ. ಮಧ್ಯಾಹ್ನ ಮಲಗುವುದ್ರಿಂದ ವಾತ ದೋಷ ಪ್ರಾಪ್ತಿಯಾಗುತ್ತದೆ.
ಮಧ್ಯಾಹ್ನದ ವೇಳೆ ಶಾರೀರಿಕ ಸಂಬಂಧ ಬೆಳೆಸಬಾರದು. ಸೂರ್ಯನನ್ನು ನಾರಾಯಣನ ರೂಪದಲ್ಲಿ ನೋಡಲಾಗುತ್ತದೆ. ಆತ ನಮ್ಮ ಜೊತೆಗಿರುವ ವೇಳೆ ಶಾರೀರಿಕ ಸಂಬಂಧ ಬೆಳೆಸುವುದು ಅಶುಭ.
ಮಧ್ಯಾಹ್ನದ ವೇಳೆ ಹನುಮಂತನ ಪೂಜೆ ಕೂಡ ಮಾಡಬಾರದು. ಹನುಮಂತ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಲಂಕೆಯಲ್ಲಿರುತ್ತಾನೆಂಬ ನಂಬಿಕೆಯಿದೆ. ಹಾಗಾಗಿ ಆ ಸಮಯದಲ್ಲಿ ಪೂಜೆ ಮಾಡಿದ್ರೆ ಯಾವುದೇ ಲಾಭ ಪ್ರಾಪ್ತಿಯಾಗುವುದಿಲ್ಲ.
ಶಾಸ್ತ್ರಗಳ ಪ್ರಕಾರ ಮಧ್ಯಾಹ್ನದ ವೇಳೆ ದಾಸವಾಳ ಗಿಡದ ಕೆಳಗೆ ಹೋಗಬಾರದು. ಇದ್ರಿಂದ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿರುವ ಸಕಾರಾತ್ಮಕ ಶಕ್ತಿ ನಷ್ಟವಾಗುತ್ತದೆ. ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ.