ಬೆಂಗಳೂರು: ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಏಕಾಂಗಿ ಪ್ರತಿಭಟನೆಗೆ ಕೊನೆಗೂ ಸರ್ಕಾರ ಮಣಿದಿದ್ದು, ಮೂಡಿಗೆರೆ ತಾಲೂಕನ್ನು ನೆರೆ ಪೀಡಿತ ಪ್ರದೇಶ ಪಟ್ಟಿಗೆ ಸೇರ್ಪಡೆ ಮಾಡಿದೆ.
ಅತಿಹೆಚ್ಚು ಮಳೆ, ಪ್ರವಾಹದಿಂದ ಹಾನಿಗೀಡಾಗಿರುವ ತಮ್ಮ ಕ್ಷೇತ್ರವನ್ನು ನೆರೆ ಪೀಡಿತ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಕುಮಾರಸ್ವಾಮಿ, ವಿಧಾನಸೌಧದ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಕಂದಾಯ ಸಚಿವ ಆರ್. ಅಶೋಕ್ ವಿರುದ್ಧವೂ ಅಸಮಾಧಾನ ಹೊರಹಾಕಿದ್ದರು. ಇದೀಗ ಮೂಡಿಗೆರೆ ಸೇರಿದಂತೆ 22 ತಾಲೂಕುಗಳನ್ನು ಹೊಸದಾಗಿ ನೆರೆ ಪೀಡಿತ ಪಟ್ಟಿಗೆ ಸರ್ಕಾರ ಸೇರ್ಪಡೆ ಮಾಡಿದೆ.
ಬಿಗ್ ನ್ಯೂಸ್: IRCTC ಯಿಂದ ಮಹಿಳೆಯರಿಗೆ ರಕ್ಷಾ ಬಂಧನದ ಗಿಫ್ಟ್
ಈ ಕುರಿತು ಮಾತನಾಡಿರುವ ಸಚಿವ ಆರ್. ಅಶೋಕ್, 61 ತಾಲೂಕುಗಳನ್ನು ನೆರೆ ಪೀಡಿತವೆಂದು ಘೋಷಿಸಿದ್ದೆವು. ಮಳೆ ಹಾನಿ ಹೆಚ್ಚಿದ್ದರಿಂದ ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ಬೆಳಗಾವಿ, ಹೊಸನಗರ, ಮುದ್ದೇಬಿಹಾಳ ಸೇರಿದಂತೆ ಹೊಸದಾಗಿ ಮತ್ತೆ 22 ತಾಲೂಕುಗಳನ್ನು ಪ್ರವಾಹ ಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದರು.