ಮಧ್ಯಪ್ರದೇಶದ ಗುಣಾ ಜಿಲ್ಲೆಯ ಚಕ್ದೇಪುರ್ ಗ್ರಾಮದಲ್ಲಿರೋ ಸರ್ಕಾರಿ ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿನಿಯರೇ ಸ್ವಚ್ಛಗೊಳಿಸ್ತಾ ಇರೋದು ಬೆಳಕಿಗೆ ಬಂದಿದೆ. ಬಾಲಕಿಯರು ಪೊರಕೆ, ಬಕೆಟ್ ಮತ್ತು ಚೊಂಬು ಹಿಡಿದು ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ಫೋಟೋಗಳು ವೈರಲ್ ಆಗಿವೆ.
ಇವರು 5 ಮತ್ತು 6 ನೇ ತರಗತಿಯ ವಿದ್ಯಾರ್ಥಿನಿಯರು ಎನ್ನಲಾಗ್ತಿದೆ. ಬಲವಂತವಾಗಿ ವಿದ್ಯಾರ್ಥಿನಿಯರ ಬಳಿಯೇ ಟಾಯ್ಲೆಟ್‌ಗಳನ್ನ ಸ್ವಚ್ಛಮಾಡಿಸಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಆದ್ರೆ ಜಿಲ್ಲಾ ಶಿಕ್ಷಣ ಅಧಿಕಾರಿ ಇದನ್ನು ನಿರಾಕರಿಸಿದ್ದಾರೆ. ಈ ಮಧ್ಯೆ ಘಟನೆ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ.
ಶೌಚಾಲಯಗಳನ್ನು ಸ್ವಚ್ಛಗೊಳಿಸಿಲ್ಲ, ಮಳೆಯಿಂದಾಗಿ ಕೊಳಕಾಗಿದ್ದರಿಂದ ಶೌಚಾಲಯವನ್ನು ಬಳಸಿದ ನಂತರ ಆವರಣದಲ್ಲಿರುವ ಹ್ಯಾಂಡ್ ಪಂಪ್‌ನಿಂದ ನೀರನ್ನು ತಂದು ಸುರಿದಿದ್ದೇವೆ ಅಂತಾ ವಿದ್ಯಾರ್ಥಿನಿಯರು ಸ್ಪಷ್ಟಪಡಿಸಿದ್ದಾರೆ. ಬಾಲಕಿಯರು ಮತ್ತವರ ಪೋಷಕರು ಹಾಗೂ ಶಾಲಾ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ. ವಿದ್ಯಾರ್ಥಿನಿಯರು ಕೈಯಲ್ಲಿ ಪೊರಕೆ ಹಿಡಿದುಕೊಂಡು ಕೈ ಪಂಪ್‌ನಿಂದ ನೀರು ತರುತ್ತಿರುವ ಫೋಟೋ ಜಾಲತಾಣದಲ್ಲಿ ಹರಿದಾಡಿತ್ತು.
ಮಾಧ್ಯಮಗಳಲ್ಲಿ ಈ ಬಗ್ಗೆ ಭಾರೀ ಚರ್ಚೆ ಶುರುವಾಗ್ತಿದ್ದಂತೆ ತನಿಖೆಗೆ ಆದೇಶಿಸಲಾಗಿತ್ತು. ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲು ಶಾಲಾ ಶಿಕ್ಷಣ ಇಲಾಖೆಯ ತಂಡವೂ ಶಾಲೆಗೆ ಆಗಮಿಸಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಸಿಸೋಡಿಯಾ ತಿಳಿಸಿದ್ದಾರೆ.
https://twitter.com/NarendraSaluja/status/1572812570704023552?ref_src=twsrc%5Etfw%7Ctwcamp%5Etweetembed%7Ctwterm%5E1572812570704023552%7Ctwgr%5Ed141a31bf33632b3057a43fd1874d2496d568096%7Ctwcon%5Es1_&ref_url=https%3A%2F%2Fwww.india.com%2Fviral%2Fviral-pics-girls-spotted-cleaning-toilets-at-govt-school-in-mps-guna-pics-spark-outrage-5647423%2F