ರಾಯಚೂರು : ಕೊರೊನಾದಿಂದಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ, ದುಷ್ಕರ್ಮಿಗಳು ಶಾಲೆಯಲ್ಲಿಯೇ ಪಾರ್ಟಿ ಮಾಡಿ, ಅಲ್ಲಿದ್ದ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಶಾಲಾ ದಾಖಲಾತಿಯ ಮೇಲೆ ಮದ್ಯದ ವಸ್ತುಗಳನ್ನು ಇಟ್ಟು ಹೋಗಿದ್ದಾರೆ. ಮಕ್ಕಳಿಗೆ ಸೇರಿದ ಎಲ್ಲ ವಸ್ತುಗಳನ್ನು ಕದ್ದಿಲ್ಲದೆ, ದಾಖಲಾತಿಗಳನ್ನು ಹರಿದು ಹಾಕಿದ್ದಾರೆ.
ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ನಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಈ ಘಟನೆ ನಡೆದಿದೆ. ಶಾಲೆಗೆ ನುಗ್ಗಿ ಪಾರ್ಟಿ ಮಾಡಿದ್ದಲ್ಲದೇ, ಮಕ್ಕಳಿಗಾಗಿ ಇಡಲಾಗಿದ್ದ ಹಾಲಿನಪುಡಿ, ಮೊಟ್ಟೆ, ಸಕ್ಕರೆ, ಅಡುಗೆ ಎಣ್ಣೆ, ಹಾಲಿನಪುಡಿ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ದೆಹಲಿಯಲ್ಲಿ ಮತ್ತೆ ಕೊರೊನಾ ಸ್ಫೋಟ; ಸಾವಿರದ ಗಡಿ ದಾಟುತ್ತಿರುವ ಸೋಂಕಿತರ ಸಂಖ್ಯೆ
ಎಂದಿನಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಶಿಕ್ಷಕರು ದೂರು ದಾಖಲಿಸಿದ್ದಾರೆ. ಈ ವಿಕೃತಿ ಮೆರೆದ ಆರೋಪಿಗಳಿಗಾಗಿ ಸದ್ಯ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಗೆ ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸುತ್ತಿದೆ.