alex Certify ಶಾಲೆಗೆ ಬಂದ ವಿದ್ಯಾರ್ಥಿನಿಯರಿಗೆ ಹಿಜಾಬ್​ ತೆಗೆಯುವಂತೆ ಸೂಚನೆ: ಪೋಷಕರು – ಶಿಕ್ಷಕರ ನಡುವೆ ವಾಗ್ವಾದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗೆ ಬಂದ ವಿದ್ಯಾರ್ಥಿನಿಯರಿಗೆ ಹಿಜಾಬ್​ ತೆಗೆಯುವಂತೆ ಸೂಚನೆ: ಪೋಷಕರು – ಶಿಕ್ಷಕರ ನಡುವೆ ವಾಗ್ವಾದ

ರಾಜ್ಯದಲ್ಲಿ ಸಮವಸ್ತ್ರ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಶಾಲೆಗೆ ಪ್ರವೇಶಿಸುವ ಮುನ್ನ ವಿದ್ಯಾರ್ಥಿನಿಯರಿಗೆ ಹಿಜಾಬ್​ ತೆಗೆಯುವಂತೆ ಸೂಚನೆ ನೀಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಹಿಜಾಬ್​ ಹಾಗೂ ಕೇಸರಿ ಶಾಲು ವಿಚಾರದಲ್ಲಿ ರಾಜ್ಯದ ಅನೇಕ ಕಾಲೇಜುಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಿರುವುದು ಬೆಳಕಿಗೆ ಬಂದ ಬಳಿಕ ರಾಜ್ಯ ಸರ್ಕಾರವು ಶಾಲಾ – ಕಾಲೇಜುಗಳಿಗೆ ಬುಧವಾರದಿಂದ ರಜೆ ಘೋಷಣೆ ಮಾಡಿತ್ತು. ಇಂದು ಶಾಲಾ – ಕಾಲೇಜುಗಳು ತೆರೆದಿರುವ ಬೆನ್ನಲ್ಲೇ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಂಡ್ಯದ ರೋಟರಿ ಶಾಲೆಯ ಹೊರಗೆ ಹಿಜಾಬ್​ ಧರಿಸಿ ನಿಂತಿದ್ದ ವಿದ್ಯಾರ್ಥಿನಿಯರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿದ್ಯಾರ್ಥಿನಿಯರಿಗೆ ಕ್ಯಾಂಪಸ್​ ಪ್ರವೇಶಕ್ಕೂ ಮುನ್ನ ಹಿಜಾಬ್​ ತೆಗೆಯುವಂತೆ ಹೇಳಿದಕ್ಕೆ ಪೋಷಕರು ಶಿಕ್ಷಕರ ಜೊತೆಯಲ್ಲಿ ವಾಗ್ವಾದ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಅಂತಿಮವಾಗಿ ವಿದ್ಯಾರ್ಥಿನಿಯರು ತಮ್ಮ ಹಿಜಾಬ್​ಗಳನ್ನು ತೆಗೆಯಲು ಒಪ್ಪಿಗೆ ನೀಡಿದ್ದು ಬಳಿಕ ಅವರನ್ನು ಶಾಲೆಯ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.

— ANI (@ANI) February 14, 2022

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...