ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿಗಳು ಪುನಾರಂಭಗೊಂಡ ಬಳಿಕ ಶಾಲಾ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಲಾಗುವುದಿಲ್ಲ ಎಂದು ಗೋವಾ ಶಿಕ್ಷಣ ಇಲಾಖೆ ನಿರ್ದೇಶಕ ಭೂಷಣ್ ಸಾವೈಕರ್ ಹೇಳಿದ್ದಾರೆ. ಅಲ್ಲದೇ ಇದರ ಜೊತೆಯಲ್ಲಿ ಶಾಲೆಯ ಪುನಾರಂಭದ ಬಳಿಕ ವಿದ್ಯಾರ್ಥಿಗಳಿಗೆ ಸಮಯದ ರಿಯಾಯಿತಿಯನ್ನೂ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಸುತ್ತೋಲೆಯಲ್ಲಿ, ಶಾಲೆಗಳು ಆಫ್‌ಲೈನ್ ಮೋಡ್‌ನಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವಂತೆ ತಿಳಿಸಲಾಗಿದೆ ಮತ್ತು ಶಾಲಾ ಸಮವಸ್ತ್ರವನ್ನು ಅಧಿಕಾರಿಗಳು ಒತ್ತಾಯಿಸಬಾರದು. ಗೋವಾ ಶಾಲೆಗಳು 1 ರಿಂದ 12 ನೇ ತರಗತಿಗಳಿಗೆ ಫೆಬ್ರವರಿ 21, 2022 ರಿಂದ ಪುನರಾರಂಭಗೊಳ್ಳಲಿವೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತು ಸೋಂಕು ಇಳಿಮುಖವಾದ ನಂತರ ಗೋವಾ ಶಾಲೆಗಳನ್ನು ಮತ್ತೆ ತೆರೆಯಲು ಸೂಚನೆ ನೀಡಲಾಗಿದೆ. ಈ ಸಂಬಂಧ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ, ಕೋವಿಡ್-19 ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಫೆಬ್ರವರಿ 21, 2022 ರಿಂದ ಜಾರಿಗೆ ಬರುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೆ ಪುನಃ ತೆರೆಯಲು ಸಕ್ಷಮ ಪ್ರಾಧಿಕಾರವು ನಿರ್ಧರಿಸಿದೆ. ಮತ್ತು ಎಸ್‌ಒಪಿ ಮಾರ್ಗಸೂಚಿಗಳ ಪ್ರಕಾರ, ರಾಜ್ಯದಲ್ಲಿ ಶಾಲೆಗಳನ್ನು ಮರು ತೆರೆಯುವ ಕುರಿತು ಫೆಬ್ರವರಿ 17 ರ ಗುರುವಾರದಂದು ಗೋವಾ ಶಿಕ್ಷಣ ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.