ಶಾಲೆಗೆ ಬರುವ ಬಡ ಮಕ್ಕಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಮಧ್ಯಾಹ್ನದ ವೇಳೆ ಬಿಸಿಯೂಟ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಪೌಷ್ಟಿಕತೆ ಸಿಗುವುದರ ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂಬ ಉದ್ದೇಶ ಹೊಂದಲಾಗಿದೆ.
ಇದೀಗ ಮಧ್ಯಾಹ್ನದ ಬಿಸಿಯೂಟ ಯೋಜನೆ ಕುರಿತು ಅಧ್ಯಯನವೊಂದರಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಶಾಲೆಗಳಲ್ಲಿ ಉಚಿತ ಊಟ ನೀಡುತ್ತಿರುವುದರಿಂದ ಈ ಮಕ್ಕಳು ಪೌಷ್ಟಿಕತೆ ಹೊಂದಿದ್ದಾರೆ ಎಂದು ಅಮೆರಿಕದ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ನಡೆಸಿರುವ ಅಧ್ಯಯನದಲ್ಲಿ ಕಂಡು ಬಂದಿದೆ.
ಮೊದಲ ಬಾರಿಗೆ ಯಾವುದೇ ಸಾವು – ಸೋಂಕಿಲ್ಲದ ಹೆಗ್ಗಳಿಕೆ ಹೊಂದಿದೆ ಈ ಜಿಲ್ಲೆ
ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿದ್ಯಾರ್ಥಿನಿಯರಿಗೆ ವಿವಾಹದ ನಂತರ ಹುಟ್ಟುವ ಮಕ್ಕಳು ಉತ್ತಮ ಪೌಷ್ಟಿಕತೆ ಹೊಂದಿರುವುದು ಸಹ ಅಧ್ಯಯನದಲ್ಲಿ ಕಂಡು ಬಂದಿದೆ. 1993 ರಿಂದ 2016ರವರೆಗೆ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಮತ್ತು ಅವರ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾದ ವೇಳೆ ಈ ಮಹತ್ವದ ಸಂಗತಿ ತಿಳಿದುಬಂದಿದೆ.