
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಶಾಲಾ ಸಮವಸ್ತ್ರ ಧರಿಸಿರುವ ಪುಟ್ಟ ಬಾಲಕಿಯೊಬ್ಬಳು ಹಾಡಿಗೆ ಮುದ್ದು ಮುದ್ದಾಗಿ ಸ್ಟೆಪ್ಸ್ ಹಾಕಿದ್ದಾಳೆ. ಬಾಲೆಯ ಆರಾಧ್ಯ ನೃತ್ಯಕ್ಕೆ ನೆರೆದಿದ್ದವರು ತಲೆದೂಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿರುವ ಈ ವಿಡಿಯೋ ಸುಂಟರಗಾಳಿ ಎಬ್ಬಿಸಿದ್ದಂತೂ ಸುಳ್ಳಲ್ಲ. ಅನೇಕರು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಬಾಲಕಿಯ ಮನೋಜ್ಞ ನೃತ್ಯವನ್ನು ಕಂಡ ನೆಟ್ಟಿಗರು ಕೊಂಡಾಡಿದ್ದಾರೆ. ಅಂಗನವಾಡಿ ಕೇಂದ್ರದ ಮುದ್ದಾದ ಪುಟ್ಟ ಹುಡುಗಿಯು ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದಾಳೆ. ಕಚಾ ಬಾದಾಮ್ ಹಾಡಿನ ಟ್ರೆಂಡ್ ಹಳ್ಳಿಗಳಿಗೂ ಆಳಾಗಿ ಇಳಿದಿದೆ ಎಂಬುದು ಇದರಿಂದ ತಿಳಿಯುತ್ತದೆ.