ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಸಂದರ್ಭದಲ್ಲಿ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಬಿಜೆಪಿ ಸಂಸದರೊಬ್ಬರು ಅಲ್ಲಿನ ಶೌಚಾಲಯ ಕೊಳಕಾಗಿರುವುದನ್ನು ಕಂಡು ಬರಿಗೈನಲ್ಲಿ ತೊಳೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಧ್ಯಪ್ರದೇಶದ ರೇವಾ ಕ್ಷೇತ್ರದ ಸಂಸದ ಜನಾರ್ಧನ್ ಮಿಶ್ರಾ ಬರಿಗೈನಲ್ಲಿ ಶೌಚಾಲಯ ತೊಳೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಸಂಸದರ ಕಾರ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶೌಚಾಲಯ ಸ್ವಚ್ಛಗೊಳಿಸಿದ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೆ ‘ಸೇವಾ ಅಭಿಯಾನ’ ನಡೆಯುತ್ತಿದ್ದು, ಇದರ ಭಾಗವಾಗಿ ನಾನು ವಿದ್ಯಾರ್ಥಿನಿಯರ ಶಾಲೆ ಶೌಚಾಲಯ ಸ್ವಚ್ಛಗೊಳಿಸಿದ್ದೇನೆ ಎಂದಿದ್ದಾರೆ.
https://twitter.com/Janardan_BJP/status/1572955219750699011?ref_src=twsrc%5Etfw%7Ctwcamp%5Etweetembed%7Ctwterm%5E1572955219750699011%7Ctwgr%5Ead151a316d1c1fc915ce1e2b9c81196d6e78d37b%7Ctwcon%5Es1_&ref_url=https%3A%2F%2Fscroll.in%2Fvideo%2F1033510%2Fwatch-bjp-mp-janardan-mishra-cleans-toilet-in-madhya-pradesh-school