ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾಯಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ‘ಶಾಲಾ ಶಿಕ್ಷಣ’ ವೆಂದು ಮರು ನಾಮಕರಣ ಮಾಡಲು ಚಿಂತನೆ ನಡೆಸಿದ್ದು, ಇದಕ್ಕೆ ಅನುಮತಿ ಕೋರಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನಲಾಗಿದೆ.
ಬ್ರಿಟಿಷರ ಕಾಲದಲ್ಲಿ ಅಂದಿನ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಎಂದು ನಾಮಕರಣ ಮಾಡಿದ್ದು, ಇದು ಹಾಗೆಯೇ ಮುಂದುವರಿದುಕೊಂಡು ಬಂದಿತ್ತು. ಬೇರೆ ರಾಜ್ಯಗಳಲ್ಲಿ ಶಾಲಾ ಶಿಕ್ಷಣ ಎಂದಿರುವ ಕಾರಣ ರಾಜ್ಯದಲ್ಲಿ ಅದನ್ನೇ ಬಳಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ಸ್ಕೂಲ್ ಎಜುಕೇಶನ್ (www.schooleducation.kar.in) ಎಂಬ ಹೆಸರಿನಲ್ಲಿಯೇ ಇರುವ ಕಾರಣ ‘ಶಾಲಾ ಶಿಕ್ಷಣ’ ಎಂಬ ಹೆಸರು ಬಳಕೆಗೆ ಬಂದ ಸಂದರ್ಭದಲ್ಲಿ ವೆಬ್ ಸೈಟ್ ಹೆಸರು ಬದಲಾಯಿಸುವ ಪ್ರಮೇಯ ಬರುವುದಿಲ್ಲ.