
ಕಾವೇರಿ ಎಂಬ ಟ್ವಿಟ್ಟರ್ ಬಳಕೆದಾರರು ಈ ಫೋಟೋವನ್ನು ಟ್ವೀಟ್ ಮಾಡಿದ್ದು, ಇದಕ್ಕೆ ಶಾರ್ಟ್ ಅಂಡ್ ಸ್ವೀಟ್ ಎಂಬ ಶೀರ್ಷಿಕೆ ನೀಡಿದ್ದಾರೆ. ಅಷ್ಟಕ್ಕೂ ಈ ರಾಜೀನಾಮೆ ಪತ್ರದಲ್ಲಿ ಇರುವ ವಿಚಾರ ನಿಮಗೆ ನಗೆ ತರಿಸದೆ ಇರಲಾರದು.
ಉದ್ಯೋಗಿಯೊಬ್ಬರು ರಾಜೀನಾಮೆ ಸಲ್ಲಿಸುವ ವೇಳೆ ‘Bye bye Sir’ಎಂದಷ್ಟೇ ಬರೆದಿದ್ದಾರೆ. ಈ ಪತ್ರದ ಫೋಟೋ ವೈರಲ್ ಆದ ಬಳಿಕ ಕೆಲವರು ತಾವು ರಾಜೀನಾಮೆ ನೀಡುವಾಗ ಬರೆದ ಪತ್ರವನ್ನು ಉಲ್ಲೇಖಿಸಿದರೆ ಮತ್ತೆ ಕೆಲವರು ತಮ್ಮ ಕೈಕೆಳಗಿನ ಉದ್ಯೋಗಿಗಳು ರಾಜೀನಾಮೆ ನೀಡುವಾಗ ಏನು ಬರೆದಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.