ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಶಾರೀರಿಕ ಸಂಬಂಧ ಬೆಳೆಸಲು ಮೂಡ್ ಇರೋದಿಲ್ಲ. ಪದೇ ಪದೇ ಸಂಗಾತಿಗೆ ನಿರಾಸೆ ಮಾಡಲು ಸಾಧ್ಯವಾಗೋದಿಲ್ಲ. ಇಂಥ ಸಂದರ್ಭದಲ್ಲಿ ಕೆಲವೊಂದು ಸೆಕ್ಸಿ ಕೆಲಸಗಳನ್ನು ಮಾಡಿ ಇಬ್ಬರೂ ಎಂಜಾಯ್ ಮಾಡಬಹುದು. ಜೊತೆಗೆ ಭಾವನಾತ್ಮಕವಾಗಿ ಸಂಬಂಧವನ್ನು ಗಟ್ಟಿಗೊಳಿಸಬಹುದು.
ಹಾಸಿಗೆಯಲ್ಲಿ ನಿಮ್ಮ ಸಂಗಾತಿಗೆ ಮಸಾಜ್ ಮಾಡಿ. ಅವರಿಗೂ ಮಸಾಜ್ ಮಾಡುವಂತೆ ಸಲಹೆ ನೀಡಬಹುದು. ಇದು ಇಬ್ಬರ ನಡುವೆ ಪ್ರೀತಿ ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತದೆ. ಸಂಭೋಗವಿಲ್ಲದೆ ಇಬ್ಬರೂ ಎಂಜಾಯ್ ಮಾಡಬಹುದಾಗಿದೆ.
ಇಬ್ಬರೂ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಹೋಗಬಹುದು. ಕೆಲ ಸಮಯವನ್ನು ರೋಮ್ಯಾಂಟಿಕ್ ಆಗಿ ಕಳೆಯಬಹುದು. ಪಾನೀಯಗಳನ್ನು ಸೇವಿಸಿ ಆನಂದಿಸಬಹುದು. ಪ್ರೀತಿಯ ಮಾತುಗಳನ್ನಾಡಬಹುದು.
ಸಂಗಾತಿ ಜೊತೆ ಸೆಕ್ಸಿ ಚಿತ್ರವನ್ನು ವೀಕ್ಷಿಸಿ. ಇದು ಇಬ್ಬರ ನಡುವೆ ಪ್ರೀತಿ ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತದೆ.
ಪರಸ್ಪರ ಪ್ರೀತಿಯ ಮಾತುಗಳನ್ನಾಡಿ. ಪ್ರೀತಿಯಿಂದ ಅಪ್ಪಿಕೊಳ್ಳಿ. ಕೈ ಹಿಡಿದು ಪ್ರೀತಿಯಿಂದ ಐ ಲವ್ ಯೂ ಹೇಳಿ. ಯಾವ ಡ್ರೆಸ್ ನಲ್ಲಿ ಸಂಗಾತಿ ಸೆಕ್ಸಿಯಾಗಿ ಕಾಣ್ತಾರೆ ಎಂಬುದನ್ನು ಹೇಳಿ.