ಸಂಭೋಗದ ನಂತ್ರ ಪುರುಷ ವರ್ತನೆ ಭಿನ್ನವಾಗಿರುತ್ತದೆ. ಬಹುತೇಕರು ನಿದ್ರೆ ಮಾಡ್ತಾರೆ. ಮತ್ತೆ ಕೆಲವರು ಮೊಬೈಲ್ ನೋಡಿದ್ರೆ ಇನ್ನು ಕೆಲವರು ಆಹಾರ ಸೇವನೆ ಸೇರಿದಂತೆ ತಮಗಿಷ್ಟವಾಗುವ ಕೆಲಸ ಮಾಡ್ತಾರೆ. ಸಂಭೋಗದ ನಂತ್ರ ನಿದ್ರೆ ಮಾಡುವುದು ತಪ್ಪಲ್ಲ. ಆದ್ರೆ ಪರಾಕಾಷ್ಠೆ ನಂತ್ರ ಪುರುಷ ನಿದ್ರೆಗೆ ಜಾರುವುದು ಮಹಿಳೆ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.
ಸಂಭೋಗದ ನಂತ್ರ ಪುರುಷನ ತೋಳಲ್ಲಿ ತಬ್ಬಿ ಮಲಗಬೇಕು, ಇನ್ನಷ್ಟು ಪ್ರೀತಿ ಮಾಡಬೇಕು ಎಂದು ಮಹಿಳೆ ಬಯಸ್ತಾಳೆ. ಏಕಾಏಕಿ ಪುರುಷ ನಿದ್ರೆಗೆ ಜಾರಿದ್ರೆ, ಸಂಭೋಗದಲ್ಲಿ ಸಂತೃಪ್ತಿ ಸಿಕ್ಕಿಲ್ಲ, ನನ್ನ ಮೇಲೆ ಪ್ರೀತಿ ಇಲ್ಲ ಹೀಗೆ ಅನೇಕ ಪ್ರಶ್ನೆಗಳು ಆಕೆಯನ್ನು ಕಾಡುತ್ತವೆ. ವಾಸ್ತವವಾಗಿ ಪರಾಕಾಷ್ಠೆ ನಂತ್ರ ಮಹಿಳೆಯಲ್ಲಿ ಬಿಡುಗಡೆಯಾಗುವ ಹಾರ್ಮೋನ್, ಪ್ರೀತಿ ಬಯಸುತ್ತದೆ.
ಪುರುಷನಲ್ಲಿ ಪರಾಕಾಷ್ಠೆ ನಂತ್ರ ಬಿಡಗಡೆಯಾಗುವ ಹಾರ್ಮೋನ್ ಸೋಮಾರಿತನ ಬಯಸುತ್ತದೆ. ಪುರುಷ ಸಂಗಾತಿಯ ಒತ್ತಡ ಕಡಿಮೆಯಾಗಿ ರಿಲ್ಯಾಕ್ಸ್ ಬಯಸುತ್ತಾನೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸುವ ಕಾರಣ ಒತ್ತಡ ಕಡಿಮೆಯಾಗಿ, ಸುಸ್ತಾದ ಶರೀರ ನಿದ್ರೆ ಬಯಸುತ್ತದೆ.