ಸಂಭೋಗದ ನಂತ್ರ ಪುರುಷರು ಖುಷಿ ಖುಷಿಯಾಗಿರ್ತಾರೆಂದು ಭಾವಿಸಲಾಗಿದೆ. ಆದ್ರೆ ಇದು ಸುಳ್ಳು. ಸೆಕ್ಸ್ ನಂತ್ರ ಆ ಸೆಷನ್ಸ್ ಬಗ್ಗೆ ಮಹಿಳೆಯರಿಗಿಂತ ಪುರುಷರು ಹೆಚ್ಚು ಆಲೋಚನೆ ಮಾಡ್ತಾರೆ. ಅನೇಕ ಚಿಂತೆಗಳು ಅವ್ರನ್ನು ಕಾಡುತ್ತವೆ.
ಸಮೀಕ್ಷೆಯೊಂದರಲ್ಲಿ ಸೆಕ್ಸ್ ನಂತ್ರ ಏನು ಎಂಬ ಪ್ರಶ್ನೆಗಳಿಗೆ ಪುರುಷರು ಉತ್ತರ ನೀಡಿದ್ದಾರೆ.
ಸಂಭೋಗದ ನಂತ್ರ ಹೆಚ್ಚಿನ ಪುರುಷರು ತಮ್ಮ ಕಾರ್ಯಕ್ಷಮತೆ ಬಗ್ಗೆ ಚಿಂತಿಸುತ್ತಾರೆ. ಸಂಗಾತಿ ವರ್ತನೆ ಹಾಗೂ ಹಾವಭಾವಗಳಿಂದ ತನ್ನ ಕಾರ್ಯಕ್ಷಮತೆ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಾರೆ. ಹಾಸಿಗೆಯಲ್ಲಿ ಸಂಗಾತಿಗೆ ಸರಿಯಾದ ಸುಖ ಸಿಗಲಿಲ್ಲ ಎಂಬುದು ಗೊತ್ತಾದ್ರೆ ಅದು ತನ್ನಿಂದಲೇ ಎಂದುಕೊಳ್ಳುವ ಪುರುಷರು, ಉತ್ತಮ ಸೆಕ್ಸ್ ಗೆ ಏನು ಮಾಡಬೇಕೆಂದು ದಿನವಿಡಿ ಚಿಂತಿಸುತ್ತಾರೆ.
ಮಹಿಳೆಯರೊಂದೇ ಅಲ್ಲ ಕೆಲ ಪುರುಷರು ಕೂಡ ಸೆಕ್ಸ್ ನಂತ್ರ ಖುಷಿಗೊಳ್ಳುವುದಿಲ್ಲ. ಸಂಭೋಗದ ನಂತ್ರ 40 ನಿಮಿಷಗಳವರೆಗೆ ಖಿನ್ನತೆಗೊಳಗಾಗುವವರಿದ್ದಾರೆ. ಸೆಕ್ಸ್ ನಲ್ಲಿ ಸುಖ ಸಿಗದೆ ಅವ್ರು ಹೀಗೆ ವರ್ತಿಸುವುದಿಲ್ಲ. ಖಿನ್ನತೆ ತಾತ್ಕಾಲಿಕವಾಗಿ ಅವ್ರನ್ನು ಕಾಡುತ್ತದೆ.
ನಿರೀಕ್ಷೆಗಳ ಜೊತೆ ಒತ್ತಡ ಪುರುಷರನ್ನು ಕಾಡುತ್ತದೆ. ಕೆಲವೊಮ್ಮೆ ಮಹಿಳಾ ಸಂಗಾತಿ ಸೆಕ್ಸ್ ನಂತ್ರ ಪುರುಷ ಸಂಗಾತಿ ನನ್ನನ್ನು ಪ್ರೀತಿ ಮಾಡಲಿ, ಪ್ರೀತಿಯ ಮಾತುಗಳನ್ನಾಡಲಿ ಎಂದು ಬಯಸ್ತಾಳೆ. ಆದ್ರೆ ಸುಸ್ತಿನಲ್ಲಿರುವ ಪುರುಷರನ್ನು ನಿದ್ರೆ ಸೆಳೆಯುತ್ತದೆ. ನಿದ್ರೆ ಮಾಡಿದ್ರೆ ಸಂಗಾತಿ ತನ್ನ ಬಗ್ಗೆ ತಪ್ಪು ತಿಳಿಯುತ್ತಾಳೆಂಬ ಭಯ, ಒತ್ತಡ ಅವ್ರನ್ನು ಕಾಡುತ್ತದೆ.
ಮಹಿಳೆಯರು ಎಲ್ಲ ಸಮಯದಲ್ಲಿ ಪರಾಕಾಷ್ಠೆ ತಲುಪುವುದಿಲ್ಲ. ಇದು ಗೊತ್ತಿರುವ ಪುರುಷರಿಗೆ ಸಂಗಾತಿ ಪರಾಕಾಷ್ಠೆ ಬಗ್ಗೆ ಸಂಶಯ ಮೂಡುತ್ತದೆ. ಸೆಕ್ಸ್ ವೇಳೆ ಮಹಿಳಾ ಸಂಗಾತಿ ನಿಜವಾಗಿ ಪರಾಕಾಷ್ಠೆ ತಲುಪಿದ್ದಳಾ ಅಥವಾ ನನ್ನನ್ನು ಖುಷಿಗೊಳಿಸಲು ಪರಾಕಾಷ್ಠೆ ನಾಟಕವಾಡಿದ್ದಾಳಾ ಎಂಬ ಸಂಶಯ ಶುರುವಾಗುತ್ತದೆ.