ಸೆಕ್ಸ್, ಒತ್ತಡ ಕಡಿಮೆ ಮಾಡುತ್ತದೆ. ಮಾನಸಿಕ ಹಾಗೂ ದೈಹಿಕ ಸಂತೋಷ ನೀಡುವ ಸೆಕ್ಸ್ ಉತ್ಸಾಹ ಕಳೆದುಕೊಂಡ ಮನಸ್ಸನ್ನು ಸರಿ ಮಾಡಿ ಉಲ್ಲಾಸಿತಗೊಳಿಸುತ್ತದೆ ಎಂದು ನಂಬಲಾಗಿದೆ. ಆದ್ರೆ ಇತ್ತೀಚಿಗೆ ನಡೆದ ಸಂಶೋಧನೆಯೊಂದು ಆಘಾತಕಾರಿ ಸಂಗತಿಯನ್ನು ಹೊರ ಹಾಕಿದೆ. ಸೆಕ್ಸ್ ನಂತ್ರ ಕೆಲವರ ದುಃಖ, ನೋವು, ಒತ್ತಡ ಹೆಚ್ಚಾಗುತ್ತದೆ ಎಂಬ ವಿಷ್ಯ ಸಂಶೋಧನೆಯಿಂದ ಗೊತ್ತಾಗಿದೆ.
ಇಬ್ಬರು ಒಪ್ಪಿಗೆ ಮೇರೆಗೆ ಸಂಬಂಧ ಬೆಳೆಸಿ ಪರಾಕಾಷ್ಠೆ ತಲುಪಿದ್ರೂ ಕೆಲ ಜನರು ಸೆಕ್ಸ್ ನಂತ್ರ ದುಃಖಿತರಾಗ್ತಾರಂತೆ. ಹಾಗಂತ ಸಂಗಾತಿಯಿಂದ ನಿಮಗೆ ಖುಷಿ ಸಿಗ್ತಿಲ್ಲ. ಅವ್ರಿಂದ ದೂರವಿರಿ ಎಂಬುದು ಇದ್ರ ಉದ್ದೇವಲ್ಲವೆಂದೂ ಸಂಶೋಧನೆ ಹೇಳಿದೆ.
ಪ್ರತಿ ಬಾರಿ ಸಂಬಂಧ ಬೆಳೆಸಿದ ನಂತ್ರ ಖಿನ್ನತೆ, ದುಃಖ ನಿಮ್ಮನ್ನು ಕಾಡುತ್ತಿದೆಯಾ ಎಂಬುದನ್ನು ಪರೀಕ್ಷೆ ಮಾಡಿ. ಒಂದು ವೇಳೆ ಉತ್ತರ ಹೌದು ಎಂದಾಗಿದ್ದರೆ ಅದಕ್ಕೆ ಕಾರಣವೇನಿರಬಹುದು ಎಂಬುದನ್ನು ಪತ್ತೆ ಹಚ್ಚಿ. ಪರಾಕಾಷ್ಠೆ ತಲುಪುವುದು ಎಂದ್ರೆ ಒತ್ತಡ ಹೊರಹಾಕುತ್ತಿದ್ದೀರಿ ಎಂದೇ ಅರ್ಥ. ಕೆಲವೊಮ್ಮೆ ಪರಾಕಾಷ್ಠೆ ತಲುಪಿದ ನಂತ್ರ ಮನಸ್ಸಿನ ನೋವೆಲ್ಲ ಹೊರಗೆ ಬರುತ್ತದೆ. ಯಾವುದೋ ದುಃಖದ ವಿಷ್ಯ ನೆನಪಾಗಿ ಅಳು, ಖಿನ್ನತೆ ಕಾಡಬಹುದು.
ಇದು ಕೆಲವರ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಪ್ರತಿ ಬಾರಿ ಹೀಗೆ ಆದಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವ ಅಪಾಯವಿರುತ್ತದೆ. ಸಂಶೋಧಕರು ಸೆಕ್ಸ್ ಹಾಗೂ ನಂತ್ರ ಕಾಡುವ ಖಿನ್ನತೆ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಆದ್ರೆ ಯಾವುದೇ ಸೂಕ್ತ ಉತ್ತರ ಸಿಕ್ಕಿಲ್ಲ.
ಸುಖಕರ, ಆರೋಗ್ಯಕರ, ಪ್ರೀತಿಯ ಲೈಂಗಿಕ ಜೀವನ ನಿಮ್ಮದಾಗಿದ್ದು, ಪರಾಕಾಷ್ಠೆ ನಂತ್ರ ನೋವು ಕಾಡಿದ್ರೆ ತಲೆಕೆಡಿಸಿಕೊಳ್ಳಬೇಡಿ. ಇದೊಂದು ಘಟನೆ ಎಂದು ಮರೆತುಬಿಡಿ ಎನ್ನುತ್ತಾರೆ ಸಂಶೋಧಕರು.