ಬಹುತೇಕ ಎಲ್ಲಾ ಮಹಿಳೆಯರೂ ಸಂಭೋಗದ ನಂತರ ಒಂದು ರೀತಿಯ ಬೇಸರ ಮತ್ತು ಖಿನ್ನತೆಗೆ ಒಳಗಾಗ್ತಾರೆ. ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರನ್ನು ಸಹ ಅದೇ ರೀತಿಯ ಭಾವನೆಗಳು ಕಾಡುತ್ತವೆ ಅನ್ನೋದು ಎಷ್ಟೋ ಜನರಿಗೆ ತಿಳಿದಿಲ್ಲ. ಸಂಶೋಧನೆಯೊಂದು ಇದನ್ನು ದೃಢಪಡಿಸಿದೆ.
ಎಷ್ಟೋ ಬಾರಿ ಪುರುಷರು ಕೂಡ ಖಿನ್ನತೆಯಿಂದ ಬಳಲುತ್ತಾರೆ. ಇದನ್ನು ಪಿಸಿಡಿ ಅಂತಾ ಕರೆಯಲಾಗುತ್ತದೆ.
ಬೆಡ್ ರೂಮ್ ನಲ್ಲಿ ನಡೆಯೋದೆಲ್ಲ ಸರ್ವೇಸಾಮಾನ್ಯ ಅಂತಾ ಕೆಲವರು ಭಾವಿಸಿದ್ರೆ, ಹಲವರು ಸಂಭೋಗದ ನಂತರ ಬೇರೆ ಬೇರೆ ತೆರನಾಗಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಸಂಗಾತಿಯನ್ನು ತಬ್ಬಿಕೊಂಡ್ರೆ, ಇನ್ನೊಂದಷ್ಟು ಮಂದಿ ಎದ್ದು ಹೊರ ನಡೆಯುತ್ತಾರೆ. ಆ ಸಮಯದಲ್ಲಿ ಕೆಲವರನ್ನು ಒಂಟಿತನ ಕಾಡುತ್ತದೆ.
ಆದ್ರೆ ಸಂಭೋಗದ ನಂತರ ಕಾಡುವ ಪಿಸಿಡಿಗೆ ಕಾರಣ ಏನು ಅನ್ನೋದು ಇದುವರೆಗೂ ದೃಢಪಟ್ಟಿಲ್ಲ. ಆದ್ರೆ ಈ ರೀತಿ ಬೇಸರ ಕಾಡಲು ಕಾರಣ ನೆಗೆಟಿವ್ ಎಮೋಶನ್ಸ್ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ.