ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವುದು ಒಳ್ಳೆಯದು. ಸಂಭೋಗದ ಲಾಭಗಳ ಬಗ್ಗೆ ಸಂಶೋಧಕರು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಲೈಂಗಿಕ ಕ್ರಿಯೆಯಿಂದಾಗುವ ಪ್ರಯೋಜನಗಳ ಬಗ್ಗೆ ಹಲವು ಬಾರಿ ಓದಿರಬೇಕು. ಸೆಕ್ಸ್ ಅತಿಯಾದ್ರೆ ಹಾನಿಯೂ ಇದೆ. ದೀರ್ಘಕಾಲದವರೆಗೆ ಲೈಂಗಿಕ ಚಟುವಟಿಕೆಯಿಂದ ದೂರವಿದ್ದರೂ ಆರೋಗ್ಯ ಸಮಸ್ಯೆ ಕಾಡುತ್ತದೆ.
ಮಕ್ಕಳಾದ್ಮೇಲೆ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲವರು ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಅದ್ರಲ್ಲೂ ಹೆಚ್ಚಾಗಿ ಮಹಿಳೆಯರು ಇದ್ರಿಂದ ದೂರವುಳಿಯುತ್ತಾರೆ. ದೀರ್ಘಕಾಲದಿಂದ ಶಾರೀರಿಕ ಸಂಬಂಧ ಬೆಳೆಸದೆ ದೂರವಿದ್ದರೆ ಎಚ್ಚೆತ್ತುಕೊಳ್ಳಿ. ಇದ್ರಿಂದ ಕೆಲ ಅನಾರೋಗ್ಯ ಕಾಡುತ್ತದೆ.
ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಲು ದೀರ್ಘಕಾಲ ಶಾರೀರಿಕ ಸಂಬಂಧ ಬೆಳೆಸದೆ ಇರುವುದು ಒಂದು ಕಾರಣ. ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸದೆ ಹೋದಲ್ಲಿ ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇದು ದಾಂಪತ್ಯದ ಬಿರುಕಿಗೂ ಕಾರಣವಾಗುತ್ತದೆ.
ಲೈಂಗಿಕ ಕ್ರಿಯೆ ನಡೆಯದ ಕಾರಣ ಯೋನಿ ದುರ್ಬಲಗೊಳ್ಳುತ್ತದೆ. ದೀರ್ಘಕಾಲದ ನಂತ್ರ ಮತ್ತೆ ಸಂಭೋಗ ಬೆಳೆಸಲು ಕಷ್ಟವಾಗಬಹುದು. ಲೈಂಗಿಕ ಕ್ರಿಯೆಯಿಲ್ಲದ ಕಾರಣ ಯೋನಿಯ ತೇವ ಕಡಿಮೆಯಾಗುತ್ತದೆ.