ಶಾಪಿಂಗ್ ಹೋಗುವ ಸಮಯದಲ್ಲಿ ಖುಷಿಯಿಂದಲೇ ತೆರಳಿರುತ್ತೀರಿ. ಅಲ್ಲಿ ನಿಮಗೆ ಕಂಡದ್ದೆಲ್ಲ ಇಷ್ಟವಾಗಿ ಬಿಡುತ್ತದೆ. ಎಲ್ಲವೂ ಬೇಕು ಎನಿಸುತ್ತದೆ. ಅದರಂತೆ ದುಡ್ಡು ತೆತ್ತು ತರುತ್ತೀರಿ. ಮನೆಗೆ ತಂದ ಬಳಿಕ ಏಕೋ ಇಷ್ಟವಾಗುವುದಿಲ್ಲ. ಇರಲಿ ನಾಳೆ ತೊಡೋಣ ಎಂದು ಬದಿಗೆತ್ತಿಡುತ್ತೀರಿ. ಮತ್ತೆ ಅದೆಷ್ಟೋ ಸಮಯಗಳ ಕಾಲ ಅದು ಮೂಲೆ ಸೇರಿಯೇ ಇರುತ್ತದೆ. ಹೀಗಾಗದಂತೆ ಮಾಡಲು ಮೊದಲು ನಿಮಗೇನು ಬೇಕು ಎಂಬುದನ್ನು ನೀವು ಸ್ವಷ್ಟವಾಗಿ ತಿಳಿದಿರಬೇಕು.
ನಿಮ್ಮ ದೇಹದ ಆಕೃತಿಗೆ ಹೊಂದಿಕೊಳ್ಳುವಂತ ಉಡುಪುಗಳನ್ನೇ ಕೊಳ್ಳಬೇಕು. ಮಾರುಕಟ್ಟೆಗೆ ಬಂದಿರುವ ಹೊಸ ಫ್ಯಾಶನ್ ನಿಮಗೆ ಹೊಂದಿಕೆಯಾಗುತ್ತದೋ ಇಲ್ಲವೋ ಎಂಬುದನ್ನು ಮೊದಲೇ ನಿರ್ಧರಿಸಿಕೊಂಡಿರಿ.
ಪ್ರಸ್ತುತ ಟ್ರೆಂಡಿಂಗ್ ನಲ್ಲಿರುವ ಬಣ್ಣವನ್ನು ಗುರುತಿಸಿಕೊಳ್ಳಿ. ಅದು ನಿಮ್ಮ ದೇಹಕ್ಕೆ ಹೊಂದಿಕೊಳ್ಳುತ್ತದೋ ಇಲ್ಲವೋ ಎಂಬುದನ್ನು ಮೊದಲೇ ಖಚಿತಪಡಿಸಿಕೊಂಡಿರಿ. ನಿಮಗೆ ಆ ಫ್ಯಾಶನ್ ಹೊಂದದಿದ್ದರೆ ಎಷ್ಟು ದುಡ್ಡು ಕೊಟ್ಟು ಕೊಂಡರೂ ವ್ಯರ್ಥವಾಗಿ ಬಿಡುತ್ತದೆ.
ಎಂಥ ಉಡುಪು ಎಷ್ಟು ಕಂಫರ್ಟ್ ಎಂಬುದನ್ನು ಮೊದಲೇ ತಿಳಿದುಕೊಂಡಿರಿ. ಸಿಲ್ಕ್, ಕಾಟನ್, ಶಿಫಾನ್ ಇವುಗಳ ಪೈಕಿ ಯಾವ ಫ್ಯಾಬ್ರಿಕ್ಸ್ ನಿಮಗೆ ಅರಾಮದಾಯಕ ಎಂಬುದನ್ನು ತಿಳಿದುಕೊಂಡಿರಿ.
ಯಾವ ಸಂದರ್ಭದಲ್ಲಿ ತೊಡಲು ನೀವು ಉಡುಪು ಕೊಳ್ಳುತ್ತಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ. ಗ್ರಾಂಡ್ ಡ್ರೆಸ್ ತೊಟ್ಟು ಕಚೇರಿಗೆ – ಕಾಲೇಜಿಗೆ ದಿನನಿತ್ಯ ಹೋಗಲಾಗದು. ಹೀಗಾಗಿ ಜಾಣತನದಿಂದ ಖರೀದಿಸಿ.