ಶಾಪಿಂಗ್ ಪ್ರಿಯರು ನೀವಾಗಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ 17-11-2022 7:30AM IST / No Comments / Posted In: Latest News, India, Live News, Tourism ಪ್ರವಾಸಕ್ಕೆ ಹೋಗೋದು ಅಂದ್ರೆ ಎಲ್ಲರಿಗೂ ಒಂಥರಾ ಖುಷಿ. ಹೊಸ ಹೊಸ ತಾಣಗಳಲ್ಲಿ ಹೊಸ ಹೊಸ ಅನುಭವ ನಮಗಾಗುತ್ತದೆ. ಅಲ್ಲಿನ ವಿಶೇಷ ತಿನಿಸುಗಳನ್ನು ಸವಿದು, ಸುಂದರ ಸ್ಥಳಗಳನ್ನೆಲ್ಲ ಕಣ್ತುಂಬಿಕೊಳ್ಳುವುದರ ಜೊತೆಗೆ ಶಾಪಿಂಗ್ ಕೂಡ ಪ್ರವಾಸದಲ್ಲಿ ಎಲ್ಲರೂ ಇಷ್ಟಪಡುವ ಸಂಗತಿ. ನಾವು ಹೋದ ಸ್ಥಳದಲ್ಲೆಲ್ಲಾ ಏನಾದ್ರೂ ಸ್ಪೆಷಲ್ ಇದ್ರೆ ಕೊಂಡುಕೊಂಡು ಬರೋದು ವಾಡಿಕೆ. ಆದ್ರೆ ಭಾರತದಲ್ಲಿ ಕೆಲವೊಂದು ಸ್ಥಳಗಳಿವೆ, ಅವು ಸ್ಟ್ರೀಟ್ ಶಾಪಿಂಗ್ ಗೆ ಫೇಮಸ್. ಅಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಸುತ್ತಾಡಿ ಬೇಕಾಗಿದ್ದನ್ನೆಲ್ಲ ಖರೀದಿಸಬಹುದು. ಆ ಸ್ಥಳಗಳು ಯಾವುದು ಅನ್ನೋದನ್ನು ನೋಡೋಣ. ದೆಹಲಿ : ದೆಹಲಿಯ ಬೀದಿಗಳಲ್ಲಿ ಸಂಸ್ಕೃತಿಯ ಸಮ್ಮಿಲನವಿದೆ. ಯಾವಾಗ್ಲೂ ಸ್ಪೆಷಲ್ ಡಿಸ್ಕೌಂಟ್ ಮತ್ತು ಆಫರ್ ಗಳಿಗೆ ಕೊರತೆಯಿಲ್ಲ. ಸ್ಟ್ರೀಟ್ ಶಾಪಿಂಗ್ ಗೆ ನೀವು ಆರಾಮಾಗಿ ಮೆಟ್ರೋದಲ್ಲಿ ಹೋಗಬಹುದು. ಹಳೆ ದೆಹಲಿಯ ಚಾಂದಿನಿ ಚೌಕ, ಲಾಪತ್ ನಗರ್, ಜನ್ಪಥ್, ಸರೋಜಿನಿ ನಗರ್, ಖಾನ್ ಮಾರ್ಕೆಟ್, ಕನ್ಹೌಟ್ ಪ್ಲೇಸ್, ಕಮ್ಲಾ ನಗರ್ ಮತ್ತು ರಜೌರಿಯಲ್ಲಿ ಚೌಕಾಸಿ ಮಾಡಿ ಖರೀದಿ ಮಾಡಬಹುದು. ಜೈಪುರ: ಗುಲಾಬಿ ನಗರಿ ಅಂತಾನೇ ಜೈಪುರ ಹೆಸರುವಾಸಿ. ರಾಜಮನೆತಗಳಿಂದ್ಲೇ ಗುರುತಿಸಿಕೊಂಡಿದೆ. ಇಲ್ಲಿನ ಜೊಹ್ರಿ ಬಜಾರ್, ಟ್ರಿಪೊಲಿಯಾ ಬಜಾರ್, ಬಾಪು ಬಜಾರ್, ನೆಹ್ರು ಬಜಾರ್ ಮತ್ತು ಚಂದ್ಪೋಲ್ ಬಜಾರ್ ನಲ್ಲಿ ಸಾಂಪ್ರದಾಯಿಕ ವಸ್ತುಗಳು ಹೇರಳವಾಗಿ ಸಿಗುತ್ತವೆ. ಗೋವಾ : ಕಡಲ ನಗರಿ ಗೋವಾ ಬೀಚ್ ಗಳಿಂದಾನೇ ಫೇಮಸ್. ಅರ್ಪೋರಾದಲ್ಲಿರುವ ಸ್ಯಾಟರ್ಡೇ ನೈಟ್ ಬಜಾರ್, ಅಂಜುನಾದ ಫ್ಲೀ ಮಾರ್ಕೆಟ್, ಮಾಪುಸಾ ಲೋಕಲ್ ಮಾರ್ಕೆಟ್, ಬಾಗಾ ನೈಟ್ ಮಾರ್ಕೆಟ್, ಮಾರ್ಗೋವಾ ಮಾರ್ಕೆಟ್ ಮತ್ತು ಮೆಕ್ಕೀಸ್ ನೈಟ್ ಬಜಾರ್ ನಲ್ಲಿ ನೀವು ಬಿಂದಾಸ್ ಆಗಿ ಶಾಪಿಂಗ್ ಮಾಡಬಹುದು. ಕೇರಳ : ದೇವನಗರಿ ಕೇರಳ ಪ್ರಕೃತಿ ಸೌಂದರ್ಯದ ತವರು. ಕಲೆ ಮತ್ತು ಕರಕೌಶಲ್ಯವನ್ನು ಹಾಸು ಹೊದ್ದಿರುವ ತಾಣ. ಸೀರೆಗಳಿಗೆ ಕೇರಳ ಪ್ರಸಿದ್ಧಿ ಪಡೆದಿದೆ. ಕೇರಳದ ಫೋರ್ಟ್ ಕೊಚ್ಚಿಯಲ್ಲಿರೋ ಜ್ಯೂ ಸ್ಟ್ರೀಟ್, ಚಲೈ ಮಾರ್ಕೆಟ್ ರೋಡ್, ಬ್ರಾಡ್ ವೇ, ಬಜಾರ್ ರೋಡ್, ಎಂಜಿ ರೋಡ್, ಮರೀನ್ ಡ್ರೈವ್ ಮತ್ತು ಇಂಟರ್ ನ್ಯಾಶನಲ್ ಪೆಪ್ಪರ್ ಎಕ್ಸ್ ಚೇಂಜ್ ಗೆ ಶಾಪಿಂಗ್ ಪ್ರಿಯರೆಲ್ಲ ಒಮ್ಮೆ ವಿಸಿಟ್ ಮಾಡಲೇಬೇಕು. ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಶಾಪಿಂಗ್ ಗೆ ಬೆಸ್ಟ್ ಪ್ಲೇಸ್. ಇಲ್ಲಿ ಬ್ರಾಂಡೆಡ್ ಹಾಗೂ ನಾನ್ ಬ್ರಾಂಡೆಡ್ ಮಳಿಗೆಗಳು ಸಾಕಷ್ಟಿವೆ. ಚೌಕಾಸಿ ಮಾಡಿಕೊಳ್ಳುವವರೆಲ್ಲ ಚಿಕ್ಕಪೇಟೆ, ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ಗೆ ಹೋಗಲೇಬೇಕು. ಕೋಲ್ಕತ್ತಾ : ಬಂಗಾಳಿ ಕಾಟನ್ ಸೀರೆ ಮತ್ತು ಉತ್ತಮ ಗುಣಮಟ್ಟದ ಉಡುಪುಗಳು ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಸಾಂಪ್ರದಾಯಿಕ ಆಭರಣ ಖರೀದಿಗೆ ಬಾರ್ಗೈನರ್ಸ್ ಪ್ಯಾರಡೈಸ್ ಗೆ ಬರಬೇಕು. ದಕ್ಷಿಣಾಪನ್ ಶಾಪಿಂಗ್ ಸೆಂಟರ್, ಆದಿ ಢಾಕೇಶ್ವರಿ ವಸ್ತ್ರಾಲಯ, ಬುರ್ರಾ ಬಜಾರ್, ಸತ್ಯನಾರಾಯಣ ಎಸಿ ಮಾರ್ಕೆಟ್, ವರ್ದಾನ್ ಮಾರ್ಕೆಟ್ ಕೂಡ ಶಾಪಿಂಗ್ ಗೆ ಒಳ್ಳೆಯ ಜಾಗಗಳು. ಪುಸ್ತಕ ಪ್ರಿಯರಂತೂ ಆಕ್ಸ್ ಫರ್ಡ್ ಬುಕ್ ಸ್ಟೋರ್ ಗೆ ಹೋಗಬಹುದು. ಮುಂಬೈ : ಕೊಲಾಬಾದಲ್ಲಿ ನಿಮಗೆ ಬೇಕಾಗಿದ್ದೆಲ್ಲ ಸಿಗುತ್ತದೆ. ಬಟ್ಟೆ, ಚಪ್ಪಲಿ, ಆ್ಯಕ್ಸೆಸರಿಸ್ ಎಲ್ಲವೂ ರಸ್ತೆಯ ಅಕ್ಕಪಕ್ಕದಲ್ಲೇ ಲಭ್ಯ. ಆದ್ರೆ ಇಲ್ಲಿ ಚೌಕಾಸಿ ಮಾಡಲು ಮರೆಯಬೇಡಿ. ಇಲ್ಲಿ ದೊರೆಯುವ ಕೊಲ್ಹಾಪುರಿ ಆಭರಣಗಳು ಫೇಮಸ್. ಟ್ರೈ ಫ್ಯಾಷನ್ ಸ್ಟ್ರೀಟ್, ಲಿಂಕಿಂಗ್ ರೋಡ್, ಜವೇರಿ ಬಜಾರ್ ಮತ್ತು ಚೋರ್ ಬಜಾರ್ ನಲ್ಲೂ ಶಾಪಿಂಗ್ ಮಾಡಬಹುದು. ಅಹಮದಾಬಾದ್ : ಡೆನಿಮ್ ಹಾಗೂ ಕುಶಲಕರ್ಮಿಗಳಿಗೆ ಇದು ಪ್ರಸಿದ್ಧಿ ಪಡೆದ ಸ್ಥಳ. ಸಾಂಪ್ರದಾಯಿಕವಾದ, ಎಂಬ್ರಾಯಡರಿ ಮಾಡಿದ ಬ್ಯಾಗ್, ಉಡುಪುಗಳು, ಆಕ್ಸೆಸ್ಸರಿ ಇವೆಲ್ಲ ಲಾ ಗಾರ್ಡನ್ ನಲ್ಲಿ ಚೆನ್ನಾಗಿ ಸಿಗುತ್ತವೆ. ರೇವ್ದಿ ಮಾರ್ಕೆಟ್ ನಲ್ಲಿ ಉಡುಪುಗಳು, ಸಿಂಧಿ ಮಾರ್ಕೆಟ್ ನಲ್ಲಿ ಬೆಡ್ ಶೀಟ್ ಮತ್ತು ಡ್ರೆಸ್ ಮಟೀರಿಯಲ್ ಕೊಂಡುಕೊಳ್ಳುವುದು ಸೂಕ್ತ. ಪುಣೆ : ಫ್ಯಾಷನ್ ಪ್ರಿಯರು ಪುಣೆಯಲ್ಲಿ ಒಂದು ರೌಂಡ್ ಸುತ್ತಾಡಲೇ ಬೇಕು. ಫ್ಯಾಷನ್ ಸ್ಟ್ರೀಟ್ ನಲ್ಲಿ ವೆರೈಟಿ ವೆರೈಟಿ ವಸ್ತುಗಳು ಸಿಗುತ್ತವೆ. ಎಫ್ ಸಿ ರೋಡ್, ಹಾಂಕಾಂಗ್ ಮಾರ್ಕೆಟ್ ಲೇನ್, ತುಳಸಿ ಬಾಗ್ ಹಾಗೂ ಎಂಜಿ ರೋಡ್ ನಲ್ಲಿ ಕೂಡ ಶಾಪಿಂಗ್ ಮಾಡಬಹುದು. ಚಂಡೀಗಢ : ಪಂಜಾಬಿ ದುಪ್ಪಟ್ಟಾ, ಪಟಿಯಾಲಾ ಸಲ್ವಾರ್, ಫುಲ್ಕರಿ, ಜುಟ್ಟಿಸ್ ಇವನ್ನೆಲ್ಲ ಚಂಡೀಗಢದಲ್ಲಿ ಕೊಂಡುಕೊಳ್ಳಿ. ಎಂಪೋರಿಯಂ ಆಫ್ ಸೆಕ್ಟರ್ 17, ಸ್ಪರ್ಷ ಕಲೆಕ್ಷನ್ಸ್, ಆರ್ ಎಸ್ ಅಪಾರೆಲ್ಸ್, ಪಲ್ ಫುಟ್ ವೇರ್, ಮಧ್ಯ ಮಾರ್ಗ್, ಗುಜರಾತ್ ಹ್ಯಾಂಡ್ ಲೂಮ್ಸ್ ಮತ್ತು ಸೆಕ್ಟರ್ 20 ಡಿ ಯಲ್ಲೊಮ್ಮೆ ಸುತ್ತಾಡಿದ್ರೆ ನಿಮಗೆ ಬೇಕಾಗಿದ್ದೆಲ್ಲ ಕಣ್ಣಿಗೆ ಬೀಳೋದು ಪಕ್ಕಾ.