ಶಾಪಿಂಗ್ ಮಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಯಾವುದೇ ಸಮಯದಲ್ಲಾದರೂ ಬಿಡುವು ಮಾಡಿಕೊಂಡು ಶಾಪಿಂಗ್ ಗೆ ತೆರಳಿ, ಬೇಕು – ಬೇಡದ್ದನ್ನೆಲ್ಲಾ ಕೊಳ್ಳುವವರಿಗಾಗಿ ಇಲ್ಲೊಂದಿಷ್ಟು ಟಿಪ್ಸ್ ಗಳಿವೆ.
ಕಂಡಿದ್ದನ್ನೆಲ್ಲಾ ಕೊಂಡು ಮತ್ತೆ ತಲೆ ಬಿಸಿ ಮಾಡಿಕೊಳ್ಳುವ ಬದಲು ಹೋಗುವ ಮುನ್ನ ಅಗತ್ಯ ವಸ್ತುಗಳ ಪಟ್ಟಿ ತಯಾರಿಸಿ. ಅದರಂತೆ ಬೇಕಿರುವ ವಸ್ತುಗಳನ್ನು ಮಾತ್ರ ಖರೀದಿಸಿ.
ಕಾರ್ಡ್ ಅಥವಾ ಹಣವನ್ನು ಜೊತೆಯಲ್ಲಿ ಇಟ್ಟುಕೊಂಡಿರಿ. ಕ್ಯೂ ನಲ್ಲಿ ನಿಂತಾಗ ಸಿಡಿಮಿಡಿಗೊಳ್ಳದಿರಿ. ಯಾವುದಾದರೂ ವಸ್ತು ಸಿಗದಿದ್ದರೆ ಅಥವಾ ಅದರ ವಿವರ ಬೇಕಿದ್ದರೆ ಸಿಬ್ಬಂದಿಯ ಬಳಿ ನಯವಾಗಿ ಕೇಳಿ.
ನಿಮಗೆ ಅಗತ್ಯವಿರದ ವಸ್ತುಗಳನ್ನು ಕೈಯಿಂದ ಸ್ಪರ್ಶಿಸಬೇಡಿ. ಮಕ್ಕಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಶಾಪಿಂಗ್ ಹೋದಾಗ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಿ.