ಮದುವೆ ಅಂದತಕ್ಷಣ ಎಂಜಿನಿಯರ್, ಡಾಕ್ಟರ್, ಐಎಎಸ್, ಐಪಿಎಸ್ ಆಫೀಸರ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದ್ರೀಗ ಜನರ ಚಿಂತನೆ ಬದಲಾಗಿದೆ. ಸಾಮಾನ್ಯರನ್ನೂ ಯುವತಿಯರು ಮದುವೆಗೆ ಪರಿಗಣಿಸ್ತಿದ್ದಾರೆ. ಇದಕ್ಕೆ ಸಾಕ್ಷಿ ಶಾದಿ ಡಾಟ್ ಕಾಮ್. ಈ ವೆಬ್‌ಸೈಟ್‌ನಲ್ಲಿ ವಿವಾಹ ಆಕಾಂಕ್ಷಿತ ಯುವತಿಯರು ಅತಿ ಹೆಚ್ಚು ಸರ್ಚ್ ಮಾಡಿರುವ ಕೀ ವರ್ಡ್ ಯಾವುದು ಅನ್ನೋದನ್ನು ಕೇಳಿದ್ರೆ ನೀವು ಕೂಡ ಅಚ್ಚರಿ ಪಡ್ತೀರಾ.
ಶಾದಿ ಡಾಟ್ ಕಾಮ್‌ನಲ್ಲಿ “ಸ್ಟಾರ್ಟ್ಅಪ್ ಸಂಸ್ಥಾಪಕ” ಎಂಬ ಕೀವರ್ಡ್ ಅನ್ನು ಅತಿ ಹೆಚ್ಚು ಬಾರಿ ಸರ್ಚ್ ಮಾಡಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಂಬಲರ್ಹ ಮೂಲಗಳ ಪ್ರಕಾರ, ಶಾದಿ.ಕಾಮ್‌ನಲ್ಲಿ “ಸ್ಟಾರ್ಟ್‌ಅಪ್ ಉದ್ಯೋಗಿ” ಮತ್ತು “ಸ್ಟಾರ್ಟ್‌ಅಪ್ ಸಂಸ್ಥಾಪಕರು” ಪ್ರಸ್ತುತ ಅತ್ಯಂತ ಹೆಚ್ಚು ಹುಡುಕಾಟದ ಕೀವರ್ಡ್‌ಗಳಾಗಿವೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಇತ್ತೀಚೆಗೆ ಯಾರೋ ನನಗೆ ತಿಳಿಸಿದ ವಿಷಯವನ್ನು ಹಂಚಿಕೊಳ್ತಿದ್ದೇನೆ ಅಂತಾ ಡಿಜಿಟಲ್ ಇಂಡಿಯಾ ವೀಕ್‌ನಲ್ಲಿ ತಮ್ಮ ಸಮಾರೋಪ ಭಾಷಣದ ವೇಳೆಯೂ ಅವರು ಹೇಳಿದ್ರು. ಈಗ ಹೆಚ್ಚಾಗಿ ಹುಡುಕುತ್ತಿರುವ ಕೀವರ್ಡ್ IAS ಅಲ್ಲ, IPS ಅಲ್ಲ, ಟಾಟಾ ಸಂಸ್ಥೆ ಅಥವಾ ಬಿರ್ಲಾ ಕಂಪನಿ ಅಲ್ಲ. ಬದಲಾಗಿ ಸ್ಟಾರ್ಟ್ಅಪ್ ಉದ್ಯೋಗಿ ಅಥವಾ ಸ್ಟಾರ್ಟ್ಅಪ್ ಸ್ಥಾಪಕ ಎಂಬುದನ್ನು ಅತಿ ಹೆಚ್ಚು ಬಾರಿ ಸರ್ಚ್ ಮಾಡಲಾಗಿದೆ ಎಂದ್ರು.
ಟ್ವಿಟರ್‌ನಲ್ಲಿ ರಾಜೀವ್ ಚಂದ್ರಶೇಖರ್ ಹಾಕಿರೋ ಪೋಸ್ಟ್ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದ್ರೆ ಸಚಿವರು ತಮಾಷೆ ಮಾಡುತ್ತಿದ್ದಾರೋ ಅಥವಾ ಗಂಭೀರವಾಗಿ ಮಾತನಾಡುತ್ತಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ.