ದೇಶದಲ್ಲಿ ಓಮಿಕ್ರಾನ್ ನ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ರೂಪಾಂತರಿ ಓಮಿಕ್ರಾನ್ ಕಡಿಮೆ ಅವಧಿಯಲ್ಲಿ ವೇಗವಾಗಿ ಹಬ್ಬುತ್ತಿದೆ ಎಂದು ವೈರಾಣು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ದೇಶದಲ್ಲಿ ಕೇವಲ ಎರಡೂವರೆ ವಾರಗಳಲ್ಲಿಯೇ 200 ಪ್ರಕರಣಗಳು ದಾಖಲಾಗಿವೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ಹಲವು ರಾಷ್ಟ್ರಗಳಲ್ಲಿ ಒಂದೂವರೆಯಿಂದ ಮೂರು ದಿನಗಳಲ್ಲಿ ದುಪ್ಪಟ್ಟು ಪ್ರಕರಣಗಳು ದಾಖಲಾಗುತ್ತಿವೆ. ಇದನ್ನು ಗಮನಿಸಿ ದೇಶದ ದತ್ತಾಂಶ ನೋಡುವುದಾದರೆ ಡೆಲ್ಟಾ ಹರಡಿದ್ದಕ್ಕಿಂತಲೂ ದುಪ್ಪಟ್ಟು ಓಮಿಕ್ರಾನ್ ಹರಡುತ್ತಿದೆ.
ಹೊಸ ವರ್ಷದಿಂದ ಭಾರತ ಅಂಚೆ ಪಾವತಿ ಬ್ಯಾಂಕ್ನಲ್ಲಿ ಆಗಲಿದೆ ಈ ಮಹತ್ವದ ಬದಲಾವಣೆ..!
ಇದುವರೆಗೂ ಸೋಂಕು ವೇಗವಾಗಿ ಹರಡುತ್ತಿದ್ದರೂ ಅದರ ತೀವ್ರತೆಯ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಸದ್ಯ ಮೊದಲ ಪ್ರಕರಣ ದಾಖಲಾಗಿದ್ದ ದಿನದಿಂದ 18 ದಿನಗಳಲ್ಲಿಯೇ 200 ಜನರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದ್ದರೂ ಶೇ.10ಕ್ಕಿಂತ ಕಡಿಮೆ ರೋಗ ಲಕ್ಷಣ ಹೊಂದಿದೆ.
ಓಮಿಕ್ರಾನ್ ಹರಡುವಿಕೆಯಲ್ಲಿಯೂ ಮಹಾರಾಷ್ಟ್ರ ಮುಂದಿದ್ದು, ಅಲ್ಲಿ ಈಗಾಗಲೇ 54 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 19 ಪ್ರಕರಣಗಳು ದಾಖಲಾಗಿವೆ.
ಇದರ ವೇಗ ಹೆಚ್ಚಾಗಲು ಓಮಿಕ್ರಾನ್ ಟೆಸ್ಟ್ ಫಲಿತಾಂಶ ವಿಳಂಬವಾಗಿ ಬರುತ್ತಿರುವುದೂ ಒಂದು ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.