ಟ್ಯಾಟೂ ಹಾಕಿಸಿಕೊಳ್ಳುವ ಕ್ರೇಝ್ ಇರೋದು ಸಹಜ. ಆದ್ರೆ ಇಲ್ಲೊಬ್ಬ ಭೂಪ ಹಚ್ಚೆ ಹಾಕಿಸಿಕೊಳ್ಳಲು 29 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾನೆ. ಈತನ ಹೆಸರು ಇಯಾನ್ ಗ್ರಿಗ್ಸ್, ಟ್ಯಾಟೂ ಹಾಕಿಸಿಕೊಳ್ಳಲು ಸುಮಾರು 300 ಗಂಟೆಗಳ ಕಾಲ ಸೂಜಿಯಿಂದ ಚುಚ್ಚಿಸಿಕೊಂಡಿದ್ದಾನೆ. ಈತನ ದೇಹದ ತುಂಬೆಲ್ಲಾ ಹಚ್ಚೆಗಳೇ ಆವರಿಸಿಕೊಂಡಿವೆ.
ಈ ಟ್ಯಾಟೂವಿನಿಂದಾಗಿ ಇಯಾನ್‌ಗೆ ಸಿನೆಮಾದಲ್ಲೂ ಅವಕಾಶ ಸಿಕ್ಕಿದೆ. ಬಾಂಡೆಡ್ ಬೈ ಬ್ಲಡ್ ಮತ್ತು ಲೆಗಸಿ ಸೇರಿದಂತೆ ಇತರ ಚಿತ್ರಗಳಲ್ಲಿ ಈತ ಕಾಣಿಸಿಕೊಳ್ಳಲಿದ್ದಾನೆ. ಮಾದಕ ದ್ರವ್ಯ ಸೇವನೆ, ಸರಬರಾಜು ಮತ್ತು ಹಿಂಸಾಚಾರ ಪ್ರಕರಣದಲ್ಲಿ ಈತ ಜೈಲು ಸೇರಿದ್ದ. 12 ವರ್ಷಗಳ ಸುದೀರ್ಘ ಸೆರೆವಾಸದ ನಂತರ ಬಿಡುಗಡೆಯಾಗಿ ಬಂದಿದ್ದಾನೆ.
ಜೈಲಿನಿಂದ ಬಂದ ಬಳಿಕ ಟ್ಯಾಟೂ ಹಾಕಿಸಿಕೊಳ್ಳಲು ಆರಂಭಿಸಿದ್ದಾನೆ. ಹಚ್ಚೆ ಹಾಕಿಸಿಕೊಳ್ಳುವ ಆಸಕ್ತಿ ಆತನಿಗೆ 18ನೇ ವಯಸ್ಸಿನಿಂದ್ಲೇ ಇತ್ತು. ಆದ್ರೆ ಹಾರ್ಡ್‌ಕೋರ್ ಇಂಕ್ ಬಗ್ಗೆ ಪ್ರೀತಿ ಮೂಡಿದ್ದು 2015ರಲ್ಲಿ. ನಾಲ್ಕು ವರ್ಷಗಳ ಕಾಲ ಈತ ಪ್ರತಿ ವಾರ ಎರಡು ಗಂಟೆಗಳ ಕಾಲ ಹಚ್ಚೆ ಹಾಕಿಸಿಕೊಳ್ಳುತ್ತಿದ್ದ. ದೇಹದಲ್ಲಿನ್ನು ಜಾಗವೇ ಇಲ್ಲ ಎನಿಸಿದಾಗ ಟ್ಯಾಟೂ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿದ್ದಾನೆ.
2008ರಲ್ಲಿ ಇಯಾನ್ ಪ್ರೇಯಸಿ ಲಿಯಾನ್ನೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಳು. ಆ ಸಮಯದಲ್ಲಿ ಇಯಾನ್ ಜೈಲಿನಲ್ಲಿದ್ದ. ಹರೆಯವನ್ನೆಲ್ಲ ಈತ ಜೈಲಿನಲ್ಲೇ ಕಳೆದಿದ್ದಾನೆ. ಜೈಲಿನಲ್ಲಿದ್ದಾಗ್ಲೇ ಆತ ತಂದೆಯಾಗಿದ್ದಾನೆ. ಆ ಸಮಯದಲ್ಲಿ ಮಗ ಜನಿಸಿದ್ದ. ಆದ್ರೆ ಪ್ರೇಯಸಿ ಸಾವನ್ನಪ್ಪಿದ್ದಳು.