alex Certify ಶಾಕಿಂಗ್…!‌ ಒಂದು ನಿಮಿಷ ಈ ಕೆಲಸ ಮಾಡಿದ ದಂಪತಿಗೆ ಬಂತು 19 ಸಾವಿರ ಕೋಟಿ ರೂ. ಬಿಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…!‌ ಒಂದು ನಿಮಿಷ ಈ ಕೆಲಸ ಮಾಡಿದ ದಂಪತಿಗೆ ಬಂತು 19 ಸಾವಿರ ಕೋಟಿ ರೂ. ಬಿಲ್‌

ಗ್ಯಾಸ್‌ ಹಾಗೂ ಕರೆಂಟ್‌ ಬಿಲ್‌ ಅಬ್ಬಬ್ಬಾ ಅಂದ್ರೆ ಎಷ್ಟು ಬರಬಹುದು ಹೇಳಿ?  ದೊಡ್ಡ ದೊಡ್ಡ ಫ್ಯಾಕ್ಟರಿ ಕಂಪನಿಗಳಲ್ಲಿ 1 ಲಕ್ಷ ರೂಪಾಯಿ ಕಟ್ಟಬೇಕಾಗಬಹುದು. ಆದ್ರೆ ಇಂಗ್ಲೆಂಡ್‌ ನಲ್ಲಿ ಯುವ ದಂಪತಿಗೆ ಬರೋಬ್ಬರಿ 19,146 ಕೋಟಿ ರೂಪಾಯಿ ಎನರ್ಜಿ ಬಿಲ್‌ ಬಂದಿದೆ. ಕೇವಲ ಒಂದು ನಿಮಿಷ ಗ್ಯಾಸ್‌ ಬಳಸಿದ್ದಕ್ಕಾಗಿ 19 ಸಾವಿರ ಕೋಟಿ ರೂಪಾಯಿ ಬಿಲ್‌ ಬಂದಿದ್ದು ನೋಡಿ ದಂಪತಿ ಅಕ್ಷರಶಃ ಶಾಕ್‌ ಆಗಿದ್ದಾರೆ.

22 ವರ್ಷದ ಸ್ಯಾಮ್ ಮೋಟ್ರಾಮ್ ಮತ್ತು ಮ್ಯಾಡಿ ರಾಬರ್ಟ್‌ಸನ್ ದಂಪತಿ, ತಮ್ಮ ಶೆಲ್ ಎನರ್ಜಿ ಅಪ್ಲಿಕೇಶನ್‌ನಲ್ಲಿ ದೊಡ್ಡ ಮೊತ್ತದ ಈ ಬಿಲ್ ನೋಡಿ ಆಘಾತಕ್ಕೊಳಗಾಗಿದ್ದಾರೆ. ಸ್ಯಾಮ್‌ ಹಾಗೂ ಮ್ಯಾಡಿ ದಂಪತಿ ಇಂಗ್ಲೆಂಡ್‌ನ ಹಾರ್ಪೆಂಡೆನ್‌ನಲ್ಲಿ ವಾಸಿಸ್ತಿದ್ದಾರೆ. ಸಾಮಾನ್ಯವಾಗಿ ವರ್ಷಕ್ಕೆ ಸುಮಾರು 1300 ಪೌಂಡ್‌ ಅಂದ್ರೆ ಸರಿಸುಮಾರು 1.3 ಲಕ್ಷ ರೂಪಾಯಿ ಹಣವನ್ನು ಗ್ಯಾಸ್‌ ಹಾಗೂ ವಿದ್ಯುತ್‌ ಗಾಗಿ ಇವರು ಖರ್ಚು ಮಾಡ್ತಾರೆ.

ಕೇವಲ ಒಂದು ನಿಮಿಷ ಗ್ಯಾಸ್‌ ಉರಿಸಿದ್ದಾರಂತೆ. ಇದ್ದಕ್ಕಿದ್ದಂತೆ ಆಟೋ ಡೆಬಿಟ್ ಡೆಬಿಟ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬೇಕೆಂದು ಫೋನ್‌ನಲ್ಲಿ ನೋಟಿಫಿಕೇಶನ್ ಬಂದಿದೆ. ವಿಚಿತ್ರ ಎನಿಸಿದ್ರೂ ಎಲ್ಲಾ ವಸ್ತುಗಳ ಬೆಲೆ ಏರಿದೆಯಲ್ಲ ಅಂತಾ ದಂಪತಿ ಸಮಾಧಾನ ಮಾಡಿಕೊಂಡಿದ್ದರು. ಆದ್ರೆ 19,000 ಕೋಟಿ ರೂಪಾಯಿ ಬಿಲ್‌ ಬರಬಹುದೆಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ.

ಅದೃಷ್ಟವಶಾತ್ ದಂಪತಿಯ ಬಳಿ ಅಷ್ಟು ಹಣವಿರಲಿಲ್ಲ. ಖಾತೆಯಲ್ಲಿ ಇದ್ದಿದ್ದರೆ ಸಂಪೂರ್ಣ ಮೊತ್ತ ತಂತಾನೇ ಬಿಲ್‌ ಪಾವತಿಗಾಗಿ ಡೆಬಿಟ್‌ ಆಗಿಬಿಡುತ್ತಿತ್ತು. ಬಿಲ್‌ ನೋಡಿ ಕಂಗಾಲಾದ ಸ್ಯಾಮ್‌ ಹಾಗೂ ಮ್ಯಾಡಿ ಸಾಮಾಜಿಕ ಜಾಲತಾಣಗಳಲ್ಲೂ ಇದನ್ನು ಹಂಚಿಕೊಂಡಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಇದು ತಾಂತ್ರಿಕ ದೋಷದಿಂದಾದ ಸಮಸ್ಯೆ ಅಂತಾ ಶೆಲ್‌ ಎನರ್ಜಿ ಸ್ಪಷ್ಟನೆ ನೀಡಿದೆ.

ವಿಚಿತ್ರ ಅಂದ್ರೆ ಈ ದಂಪತಿಗೆ ಬಂದಿರೋ ಗ್ಯಾಸ್‌ ಬಿಲ್‌, ಇಡೀ ಬ್ರಿಟನ್‌ ನಲ್ಲಿ ಒಟ್ಟಾರೆಯಾಗಿ ಗೃಹಬಳಕೆಗೆ ಬಳಸುವ ಅನಿಲ ಮತ್ತು ವಿದ್ಯುತ್‌ ಶಕ್ತಿ ವೆಚ್ಚಕ್ಕಿಂತಲೂ ಶೇ.15ರಷ್ಟು ಹೆಚ್ಚಾಗಿದೆ. ಶೆಲ್‌ ಎನರ್ಜಿಯ ಅಪ್ಲಿಕೇಶನ್‌ನಲ್ಲಿನ ದೋಷದಿಂದ ಇಷ್ಟೊಂದು ಮೊತ್ತದ ಬಿಲ್‌ ಬಂದಿರೋದು ಸ್ಪಷ್ಟವಾಗಿದೆ. ಸ್ಯಾಮ್‌ ಮತ್ತು ಮ್ಯಾಡಿಗೆ ಇದರಿಂದ ತೊಂದರೆಯಾಗದಂತೆ ಬಿಲ್‌ ಸರಿಪಡಿಸೋದಾಗಿ ಇಲಾಖೆ ಭರವಸೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...