ಸ್ನೇಹಿತರೇ ಸೇರಿ 14 ವರ್ಷದ ಬಾಲಕನ ಕತ್ತು ಕೊಯ್ದಿದ್ದು ಮಾತ್ರವಲ್ಲದೇ ಆತನ ಕೈ ಕಾಲುಗಳನ್ನು ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಎಸೆದ ಬೆಚ್ಚಿ ಬೀಳಿಸುವ ಘಟನೆಯು ಜಾರ್ಖಂಡ್ನ ದಿಯೋಘರ್ನಲ್ಲಿ ನಡೆದಿದೆ.
ಮೂವರು ಪಳಂಗ ಜಂಗಲ್ ಕಡೆಗೆ ತೆರಳುತ್ತಿದ್ದ ವೇಳೆಯಲ್ಲಿ ಸ್ನೇಹಿತರ ನಡುವೆ ಜಗಳ ಏರ್ಪಟ್ಟಿದೆ. ಇದೇ ಜಗಳ ತಾರಕಕ್ಕೇರಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಅವಿನಾಶ್ ಎಂಬಾತ ತನ್ನ ಕೈಲಿದ್ದ ಚಾಕುವನ್ನು ತೆಗೆದು ಬಾಲಕನ ಕತ್ತನ್ನು ಸೀಳಿದ್ದಾನೆ. ಅಲ್ಲದೇ ಆತನ ಕೈ ಕಾಲುಗಳನ್ನು ಕತ್ತರಿಸಿ ಮೂರು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಬಿಸಾಡಿದ್ದಾರೆ ಎನ್ನಲಾಗಿದೆ.
ಶವವನ್ನು ಪತ್ತೆ ಹಚ್ಚಿದ ಪೊಲೀಸರು ಅವಿನಾಶ್ನನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ರಕ್ತಸಿಕ್ತವಾದ ಚಾಕು, ಮೃತ ಬಾಲಕನ ಮೊಬೈಲ್ ಫೋನ್ನ್ನು ವಶಕ್ಕೆ ಪಡೆಯಲಾಗಿದೆ.
ಮೃತ ಬಾಲಕನ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. 19 ವರ್ಷದ ಅವಿನಾಶ್ ವಿರುದ್ಧ ಐಪಿಸಿ ಸೆಕ್ಷನ್ 302, 201, 120 ಬಿ ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.