alex Certify ಶಾಕಿಂಗ್​: ಸ್ಕೂಟಿಯಲ್ಲಿ ಮಹಿಳೆಯನ್ನು ಎಳೆದು ನಡು ರಸ್ತೆಯಲ್ಲಿ ಬಿಸಾಡಿದ ಪಾಪಿಗಳು..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಸ್ಕೂಟಿಯಲ್ಲಿ ಮಹಿಳೆಯನ್ನು ಎಳೆದು ನಡು ರಸ್ತೆಯಲ್ಲಿ ಬಿಸಾಡಿದ ಪಾಪಿಗಳು..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ….!

ಸ್ಕೂಟಿಯ ಮೇಲಿದ್ದ ಖದೀಮರು ಮಹಿಳೆಯ ಮೊಬೈಲ್​ನ್ನು ಕಸಿಯುವ ಸಲುವಾಗಿ ಆಕೆಯನ್ನು ಸ್ಕೂಟಿಯಲ್ಲಿ 200 ಮೀಟರ್​ವರೆಗೆ ಎಳೆದೊಯ್ದ ಶಾಕಿಂಗ್​ ಘಟನೆಯು ದೆಹಲಿಯ ಶಾಲಿಮಾರ್​ ಬಾಗ್​ ಪ್ರದೇಶದಲ್ಲಿ ನಡೆದಿದೆ. ಕ್ಯಾಮಾರದಲ್ಲಿ ಬೆಚ್ಚಿ ಬೀಳಿಸುವ ದೃಶ್ಯವು ಸೆರೆಯಾಗಿದೆ.

ಆಘಾತಕಾರಿ ವಿಡಿಯೋದಲ್ಲಿ ಸ್ಕೂಟಿಯ ಮೇಲಿದ್ದ ಇಬ್ಬರು ಕಳ್ಳರು ರಸ್ತೆಯಲ್ಲಿ ತಪ್ಪಾದ ದಿಕ್ಕಿನಲ್ಲಿ ಸ್ಕೂಟಿ ಚಲಾಯಿಸಿಕೊಂಡು ಬಂದಿದ್ದಾರೆ. ಸ್ಕೂಟಿ ಸವಾರಿ ಮಾಡುತ್ತಿದ್ದ ವ್ಯಕ್ತಿಯು ಮಹಿಳೆಯನ್ನು ಎಳೆದುಕೊಂಡು ಬಂದಿದ್ದಾನೆ ಹಾಗೂ ನಡು ರಸ್ತೆಯಲ್ಲಿ ಆಕೆಯನ್ನು ಎಸೆಯಲಾಗಿದೆ.

ಮಹಿಳೆಯು ನಡು ರಸ್ತೆಯಲ್ಲಿ ಬೀಳುತ್ತಿದ್ದಂತೆಯೇ ಜನಸಂದಣಿಯೇ ಅಲ್ಲಿ ನೆರೆದಿದೆ. ವಾಹನಗಳನ್ನು ನಿಲ್ಲಿಸಿದ ಜನತೆ ಮಹಿಳೆಯತ್ತ ಧಾವಿಸಿದ್ದಾರೆ.
ಗಾಯಗೊಂಡ ಮಹಿಳೆಯು ಶಾಲಿಮಾರ್​ ಭಾಗ್​​ನ ಫೋರ್ಟಿಸ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಇಲ್ಲಿಯೇ ಆಕೆಯನ್ನು ದಾಖಲು ಮಾಡಲಾಗಿದೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.

— Sanjay Jha (@JhaSanjay07) December 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...