
ಗೇಟ್ ನಿಂದ ಒಳಗೆ ಬಂದ ಶಸ್ತ್ರಸಜ್ಜಿತ ರಷ್ಯಾ ಸೈನಿಕರ ವಿರುದ್ಧ ವೃದ್ಧ ದಂಪತಿ ನಿರ್ಭಯವಾಗಿ ಎದುರು ನಿಂತಿದ್ದಾರೆ. ಈ ಸಿಸಿ ಟಿವಿ ದೃಶ್ಯಾವಳಿಯನ್ನು ಹಂಚಿಕೊಂಡ ಕೈವ್‌ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿ ದಂಪತಿಯನ್ನು ಪ್ರಶಂಸಿಸಿದೆ. ಮೂವರು ರಷ್ಯಾ ಸೈನಿಕರ ವಿರುದ್ಧ ಎದುರು ನಿಂತ ಇವರನ್ನು ಉಕ್ರೇನ್ ನ ಹೀರೋಗಳು ಎಂದು ಯುಎಸ್ ರಾಯಭಾರ ಕಚೇರಿ ಪ್ರಶಂಸಿಸಿದೆ.
ದಂಪತಿಗಳ ಮನೆಯಿಂದ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಮೂವರು ಶಸ್ತ್ರಸಜ್ಜಿತ ರಷ್ಯಾದ ಸೈನಿಕರು ಒಳನುಗ್ಗಲು ಪ್ರಾರಂಭಿಸಿದ್ದಾರೆ. ತಮ್ಮ ಆಯುಧಗಳನ್ನು ಹಿಡಿದು ಹೆದರಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ದಂಪತಿ ಸೈನಿಕರನ್ನು ಎದುರಿಸುತ್ತಾರೆ. ಸೈನಿಕರ ಮೇಲೆ ಕೂಗುತ್ತಾರೆ. ಈ ವೇಳೆ ಸೈನಿಕ ಆಕಾಶದಲ್ಲಿ ಫೈರಿಂಗ್ ಮಾಡಿದ್ರೂ, ಹೆದರದ ದಂಪತಿ ವಾದ ಮುಂದುವರೆಸಿದ್ದಾರೆ. ಅಂತಿಮವಾಗಿ ಸೈನಿಕರು ಅಲ್ಲಿಂದ ಹೊರಟು ಹೋಗುತ್ತಾರೆ. ನಂತರ ದಂಪತಿ ತಮ್ಮ ಮನೆಯ ಗೇಟ್ ಅನ್ನು ಮುಚ್ಚಿದ್ದಾರೆ. ಈ ವಿಡಿಯೋ ಹಲವಾರು ವೀಕ್ಷಣೆಗಳನ್ನು ಗಳಿಸಿದ್ದು, ವೈರಲ್ ಆಗಿದೆ.