
ನಾವೆಲ್ಲ ಒಂದಿಲ್ಲೊಂದು ಕಾರಣಕ್ಕೆ ಒಮ್ಮೆಯಾದರೂ ಆಸ್ಪತ್ರೆಗೆ ಭೇಟಿ ನೀಡಿರುತ್ತೇವೆ. ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಹಸಿರು ಗೌನ್ ಧರಿಸುವುದನ್ನು ನೀವು ಗಮನಿಸಿರಬೇಕು. ವೈದ್ಯರೆಲ್ಲಾ ಹಸಿರು ಬಣ್ಣದ ಬಟ್ಟೆಯನ್ನೇ ಯಾಕೆ ಧರಿಸುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದು. ಇದಕ್ಕೂ ವೈಜ್ಞಾನಿಕ ಕಾರಣವಿದೆ.
ನಾವು ಪ್ರಕಾಶಮಾನವಾದ ಸ್ಥಳದಿಂದ ಕತ್ತಲ ಕೋಣೆಗೆ ಪ್ರವೇಶಿಸಿದಾಗ, ಹಸಿರು ಅಥವಾ ನೀಲಿ ಬಣ್ಣಕ್ಕೆ ತೆರೆದುಕೊಂಡಾಗ ನಮ್ಮ ದೃಷ್ಟಿ ಚುರುಕಾಗುವುದನ್ನು ನೀವು ಗಮನಿಸಿರಬಹುದು. ಆಪರೇಷನ್ ರೂಮ್‌ನಲ್ಲಿ ವೈದ್ಯರು ಕೂಡ ಇದೇ ಕಾರಣಕ್ಕೆ ಹಸಿರು ಬಟ್ಟೆಯನ್ನು ಧರಿಸುತ್ತಾರೆ.
ಬೆಳಕಿನ ವರ್ಣಪಟಲದಲ್ಲಿ ಹಸಿರು ಮತ್ತು ನೀಲಿ, ಕೆಂಪು ಬಣ್ಣಕ್ಕೆ ವಿರುದ್ಧವಾಗಿವೆ. ಆಪರೇಷನ್ ಸಮಯದಲ್ಲಿ ಶಸ್ತ್ರಚಿಕಿತ್ಸಕನ ಗಮನವು ಹೆಚ್ಚಾಗಿ ಕೆಂಪು ಬಣ್ಣದ ಮೇಲೆ ಉಳಿಯುತ್ತದೆ. ಬಟ್ಟೆಯ ಹಸಿರು ಮತ್ತು ನೀಲಿ ಬಣ್ಣವು ಶಸ್ತ್ರಚಿಕಿತ್ಸಕನ ದೃಷ್ಟಿಯನ್ನು ಹೆಚ್ಚಿಸುವುದಲ್ಲದೆ, ಕೆಂಪು ಬಣ್ಣಕ್ಕೆ ಹೆಚ್ಚು ಸೂಕ್ಷ್ಮತೆಯನ್ನು ನೀಡುತ್ತದೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹಸಿರು ಬಟ್ಟೆಯು ಕಣ್ಣುಗಳಿಗೆ ಸ್ವಲ್ಪ ವಿಶ್ರಾಂತಿ ನೀಡುತ್ತದೆ. ಮೂಲಗಳ ಪ್ರಕಾರ ಇದಕ್ಕೆ ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಸಾಮಾನ್ಯವಾಗಿ ನೀಲಿ ಮತ್ತು ಬಿಳಿ ಉಡುಪುಗಳನ್ನು ಧರಿಸುತ್ತಾರೆ. ಹಸಿರು ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆ. ಏಕೆಂದರೆ ಅದರ ಮೇಲೆ ರಕ್ತದ ಕಲೆಗಳು ಕಂದು ಬಣ್ಣದಲ್ಲಿರುತ್ತವೆ. ವೈದ್ಯರು ದೀರ್ಘಕಾಲದವರೆಗೆ ನೀಲಿ ಅಥವಾ ಹಸಿರು ಉಡುಪನ್ನು ಧರಿಸುತ್ತಾರೆ.
ಹಿಂದಿನ ಕಾಲದಲ್ಲಿ ವೈದ್ಯರು ಮತ್ತು ಎಲ್ಲಾ ಆಸ್ಪತ್ರೆಯ ಸಿಬ್ಬಂದಿ ಬಿಳಿ ಬಟ್ಟೆಯನ್ನು ಧರಿಸುತ್ತಿದ್ದರು, ಆದರೆ ವೈದ್ಯರು 1914 ರಲ್ಲಿ ಅದನ್ನು ಹಸಿರು ಬಣ್ಣಕ್ಕೆ ಬದಲಾಯಿಸಿದರು. ಅಂದಿನಿಂದ ಇದು ಜನಪ್ರಿಯವಾಯಿತು. ಇತ್ತೀಚಿನ ದಿನಗಳಲ್ಲಿ ಕೆಲವು ವೈದ್ಯರು ನೀಲಿ ಬಟ್ಟೆಗಳನ್ನು ಸಹ ಧರಿಸುತ್ತಾರೆ.