‘ಶರ್ಟ್’ ಇಷ್ಟಪಡುವ ಮಹಿಳೆಯರಿಗಾಗಿ 29-01-2022 5:30AM IST / No Comments / Posted In: Beauty, Latest News, Live News, Life Style ಕೆಲವು ಮಹಿಳೆಯರಿಗೆ ಪುರುಷರ ಉಡುಪು ಧರಿಸುವುದು ಎಂದರೆ ಬಹಳ ಇಷ್ಟ. ಡ್ರೆಸ್ ಯಾವುದಾದರೇನು, ಧರಿಸಿದಾಗ ಹಿತ ಎನಿಸಬೇಕು ಎನ್ನುವ ಪೈಕಿ ನೀವು ಒಬ್ಬರಾದರೆ ನಿಮಗಾಗಿ ಕೆಲವು ಟಿಪ್ಸ್ ಗಳು ಇಲ್ಲಿವೆ. ಮನೆಯಲ್ಲಿ ತಂದೆ, ಪತಿ, ಸಹೋದರರ ಉಡುಪು ಧರಿಸಿ ಸ್ಟೈಲಿಶ್ ಆಗಿ ಕಾಣಿಸುವುದು ಹೇಗೆಂದು ತಿಳಿಯೋಣ. ಶರ್ಟ್ ಎಂದ್ರೆ ನಿಮಗಿಷ್ಟವೇ, ನಿಮ್ಮ ಶರ್ಟ್ ಧರಿಸಿ ಬೋರ್ ಆಗಿದೆಯೇ? ನಿಮ್ಮ ಮನೆಯಲ್ಲಿ ಇರುವ ಪುರುಷರ ಶರ್ಟ್ ಧರಿಸಿ, ಇನ್ ಶರ್ಟ್ ಮಾಡಲು ಮರೆಯದಿರಿ. ಇದಕ್ಕೆ ಪ್ಯಾಂಟ್ ಅಥವಾ ಪೆನ್ಸಿಲ್ ಸ್ಕರ್ಟ್ ಗಳು ಉತ್ತಮವಾಗಿ ಹೊಂದಿಕೊಳ್ಳುತ್ತವೆ. ಉದ್ದ ಶರ್ಟ್ ಇದ್ದರೆ ಅದು ನಿಮ್ಮ ಮೊಣಕಾಲಿಗಿಂತ ಸ್ವಲ್ಪ ಮೇಲಿದ್ದರೆ ನೀವು ಶಾರ್ಟ್ಸ್ ಇಲ್ಲವೇ ಹಾಟ್ ಪ್ಯಾಂಟ್ ಧರಿಸಬಹುದು. ಇನ್ನೂ ಉದ್ದವಿದ್ದರೆ ಒನ್ ಪೀಸ್ ಡ್ರೆಸ್ ಮಾಡಬಹುದು. ಅದಕ್ಕಾಗಿ ನೀವು ಬೆಲ್ಟ್ ಬಳಸಬೇಕು ಅಷ್ಟೇ ಲೆಗ್ ವಾರ್ಮರ್ ಗಳನ್ನು ಬಳಸಿ ಚಳಿಗಾಲದಲ್ಲೂ ಬೆಚ್ಚಗಿರಬಹುದು. ಶರ್ಟ್ ಜೊತೆಗೆ ಸ್ಕರ್ಟ್ ಇಂದಿನ ಟ್ರೆಂಡ್ ಗಳಲ್ಲಿ ಒಂದು. ಇವೆರಡರ ಕಲರ್ ಕಾಂಬಿನೇಷನ್ ಕುರಿತು ಸ್ವಲ್ಪ ಗಮನ ಹರಿಸಬೇಕಾಗುತ್ತದೆ. ಡೆನಿಮ್ ಶರ್ಟ್ ಧರಿಸುತ್ತಿದ್ದರೆ ಜಾಕೆಟ್ ರೀತಿ ಹಾಕಿಕೊಳ್ಳಿ. ಬಿಳಿ ಶರ್ಟ್ ಹಾಗೂ ನೀಲಿ ಜೀನ್ಸ್ ಡೆನಿಮ್ ಶರ್ಟ್ ನ ಲುಕ್ ಅನ್ನೇ ಬದಲಾಯಿಸುತ್ತದೆ. ಪುರುಷರ ಬ್ಲೇಜರ್ ಅನ್ನು ಟೈಟ್ ಅಥವಾ ಡೆನಿಮ್ ಗಳ ಜೊತೆ ಧರಿಸಿ ಸ್ಮಾರ್ಟ್ ಲುಕ್ ಪಡೆಯಿರಿ. ಇದಕ್ಕೆ ಜೊತೆಯಾಗಿ ಹೀಲ್ಸ್ ಅಥವಾ ಬೂಟು ಧರಿಸಿದರೆ ಪರ್ಫೆಕ್ಟ್ ಲುಕ್ ನಿಮ್ಮದಾಗುತ್ತದೆ.