alex Certify ಶರ್ಟ್ ʼಬಟನ್ʼ ಅದಲು ಬದಲಾಗಿ ಹಾಕಿಕೊಂಡರೆ ಏನರ್ಥ ಗೊತ್ತಾ…….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶರ್ಟ್ ʼಬಟನ್ʼ ಅದಲು ಬದಲಾಗಿ ಹಾಕಿಕೊಂಡರೆ ಏನರ್ಥ ಗೊತ್ತಾ…….?

ವಿಶ್ವದ ಪ್ರತಿಯೊಂದು ವಸ್ತುಗಳು ಇನ್ನೊಂದು ವಸ್ತುವಿನ ಜೊತೆ ಸಂಬಂಧ ಹೊಂದಿರುತ್ತವೆ. ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ನಮಗೆ ಅನೇಕ ಸಂಕೇತಗಳನ್ನು ನೀಡುತ್ತವೆ.

ಈ ಹಿಂದೆ ಹೇಳಿದಂತೆ ಅನೇಕ ಘಟನೆಗಳು ಭವಿಷ್ಯದಲ್ಲಾಗುವ ದುರ್ಘಟನೆ ಅಥವಾ ಒಳ್ಳೆ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ. ಇದ್ರ ಬಗ್ಗೆ ನಮಗೆ ಮೊದಲೇ ಗೊತ್ತಿದ್ದಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಯತ್ನ ಮಾಡಬಹುದು.

ಸೀನು ಬರುವುದು ಶುಭವಲ್ಲ ಎನ್ನಲಾಗುತ್ತದೆ. ನೀವು ಹೊರಗೆ ಹೊರಟಿರುವಾಗ ಇನ್ನೊಬ್ಬ ವ್ಯಕ್ತಿ ಒಂದು ಸೀನು ಸೀನಿದ್ರೆ ತಕ್ಷಣ ಅಲ್ಲಿಂದ ಹೊರಡಬಾರದು. ಸ್ವಲ್ಪ ಹೊತ್ತು ಕುಳಿತು ಹೋಗಬೇಕು. ಆದ್ರೆ ಒಂದಕ್ಕಿಂತ ಹೆಚ್ಚು ಬಾರಿ ಸೀನಿದ್ರೆ ಅದು ಶುಭ ಸಂಕೇತ. ಅಂಗಡಿಯಲ್ಲಿ ವಸ್ತು ಖರೀದಿಗೆ ಹೋದಾಗ ಸೀನು ಬಂದ್ರೆ ಅದು ಶುಭ ಸಂಕೇತ. ದಾರಿಯಲ್ಲಿ ಆಕಳು ಸೀನಿದ ಶಬ್ಧ ಕೇಳಿದ್ರೆ ಇದು ದುರ್ಘಟನೆಯ ಸಂಕೇತ. ಹಾಗಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಹೋಗಬೇಕು.

ಮನೆಯಲ್ಲಿ ಸಾಮಾನ್ಯವಾಗಿ ಕೀಚೈನ್ ಇದ್ದೇ ಇರುತ್ತದೆ. ಅದು ಸಮೃದ್ಧಿಯ ಸಂಕೇತ. ನಿಮಗೆ ಗೊತ್ತಾ, ನಿಮ್ಮ ಬಳಿ ಇರುವ ಕೀಚೈನ್ ಜಂಗು ಹಿಡಿಯುತ್ತಿದ್ದರೆ ಅದು ಬಹಳ ಒಳ್ಳೆ ಸಂಕೇತ. ಶೀಘ್ರವೇ ನಿಮಗೆ ಧನಲಾಭವಾಗಲಿದೆ ಎಂದರ್ಥ.

ಮನೆಯಿಂದ ಹೊರಗೆ ಹೊರಡಲು ಸಿದ್ಧವಾಗಿದ್ದು, ಡ್ರೆಸ್ ಬಟನ್ ಅದಲು ಬದಲಾಗಿ ಹಾಕಿಕೊಂಡಿದ್ದರೆ ಸ್ವಲ್ಪ ಎಚ್ಚರ ವಹಿಸಿ. ಇದು ಅಶುಭ ಘಟನೆಗೆ ಮುನ್ಸೂಚನೆಯಾಗಲಿದೆ. ನಿಮ್ಮ ಯಾವುದೇ ಕೆಲಸ ಪೂರ್ಣಗೊಳ್ಳುವುದಿಲ್ಲ ಎಂದರ್ಥ. ಹಾಗಾಗಿ ಬಟ್ಟೆಯನ್ನು ಬಿಚ್ಚಿ, ಮತ್ತೊಮ್ಮೆ ಸರಿಯಾಗಿ ಧರಿಸಿ.

ರಸ್ತೆ ಮೇಲೆ ಹೋಗುತ್ತಿರುವಾಗ ದಾರಿಯಲ್ಲಿ ಬಟನ್ ಕಾಣಿಸಿಕೊಂಡ್ರೆ ಒಳ್ಳೆಯದು. ಶೀಘ್ರವೇ ಹಳೆ ಸ್ನೇಹಿತನ ಭೇಟಿ ನಿಮಗೆ ಆಗಲಿದೆ ಎಂದರ್ಥ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...