ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ದೇಹವನ್ನು ನಾವು ದೇವಸ್ಥಾನದಂತೆ ಕಾಪಾಡಿಕೊಳ್ಳಬೇಕು. ಎಷ್ಟೇ ಸ್ವಚ್ಛವಾಗಿ ನೀವು ಕೈತೊಳೆದರೂ ನಿಮ್ಮ ಕೈ ಶುದ್ಧವಾಗಿರುವುದಿಲ್ಲ. ಬಹು ಬೇಗ ಸೋಂಕು ನಿಮ್ಮ ಕೈಗಳಿಗೆ ಅಂಟಿಕೊಳ್ಳುತ್ತವೆ.
ಸೋಂಕುಗಳು ಕೈನಲ್ಲಿರುವುದರಿಂದ ನಿಮ್ಮ ದೇಹವನ್ನು ಬರಿಗೈನಲ್ಲಿ ಮುಟ್ಟಿದರೆ ರೋಗ ಬರುವುದು ನಿಶ್ಚಿತ. ಕೆಲವು ಅಂಗಗಳನ್ನು ನಾವು ಬರಿಗೈನಲ್ಲಿ ಮುಟ್ಟಬಾರದು.
ಕಿವಿ: ಕಿವಿಯೊಳಗೆ ಕೈಬೆರಳು ಇಲ್ಲ ಕಡ್ಡಿಯನ್ನು ಹಾಕುವುದು ಕೆಲವರಿಗೆ ಅಭ್ಯಾಸ. ಇದರಿಂದ ಹಿತವೆನಿಸುತ್ತದೆ ಕೂಡ. ಆದರೆ ಕಿವಿಯೊಳಗಿನ ಸೂಕ್ಷ್ಮ ಪದರ ಹರಿದು ಹೋಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಕೈಗೆ ಅಂಟಿರುವ ಸೋಂಕು ಕಿವಿಯೊಳಗೆ ಸೇರಿ ಇನ್ನೊಂದು ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಕಿವಿಯೊಳಗೆ ತುರಿಕೆಯಾಗ್ತಾ ಇದ್ದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
ಮುಖ: ಮುಖಕ್ಕೆ ಕೈ ತಾಗಿಸುವುದು ಒಳ್ಳೆಯದಲ್ಲ. ಮುಖವನ್ನು ನೀರಿನಿಂದ ತೊಳೆಯಿರಿ. ಆದ್ರೆ ಕೈಗಳಿಂದ ಆಗಾಗ ಮುಟ್ಟುತ್ತಿರಬೇಡಿ. ಕೈಗೆ ಅಂಟಿಕೊಂಡಿರುವ ಸೂಕ್ಷ್ಮಾಣು ಜೀವಿಗಳು ನಿಮ್ಮ ಮುಖಕ್ಕೆ ಕಪ್ಪು ಚುಕ್ಕೆಯಾಗುತ್ತವೆ. ಮುಖದಲ್ಲಿ ಮೊಡವೆ ಸೇರಿದಂತೆ ನಿಮ್ಮ ಮುಖದ ಅಂದ ಕೆಡಲು ಇದೇ ಕಾರಣವಾಗುತ್ತದೆ.
ಕಣ್ಣು: ಕಣ್ಣು ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದು. ಯಾವುದೇ ಕಾರಣಕ್ಕೂ ಕೈಗಳಿಂದ ಕಣ್ಣುಗಳನ್ನು ಮುಟ್ಟುವುದು, ತಿಕ್ಕಿಕೊಳ್ಳುವುದು ಮಾಡಬಾರದು. ಹಾಗೆ ಮಾಡುತ್ತಿದ್ದರೆ ಕಣ್ಣಿಗೆ ಗ್ಲಾಸ್ ಬರುವುದು ಗ್ಯಾರಂಟಿ.
ಬಾಯಿ: ಇಂಗ್ಲೆಂಡ್ ನಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ ಕೆಲಸದ ಒತ್ತಡದಲ್ಲಿರುವ ಜನರು ದಿನದಲ್ಲಿ ಸರಾಸರಿ 23.6 ಬಾರಿ ಬಾಯಿಗೆ ಬೆರಳು ಹಾಕ್ತಾರಂತೆ. ಹೀಗೆ ಹಾಕುವುದರಿಂದ ನಾವೇ ರೋಗವನ್ನು ಆಹ್ವಾನಿಸಿದಂತೆ ಎನ್ನುತ್ತದೆ ಅಧ್ಯಯನ.
ಮೂಗು: ಮೂಗಿಗೆ ಬೆರಳು ಹಾಕುವ ಕೆಟ್ಟ ಅಭ್ಯಾಸವಿರುವ ಶೇಕಡಾ 51 ರಷ್ಟು ಮಂದಿಗೆ ಸ್ಟ್ಯಾಫಿಲೋಕೊಕಸ್ ಬ್ಯಾಕ್ಟೀರಿಯಾ ಸೋಂಕು ತಗುಲುವ ಅಪಾಯವಿದೆ.