ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿರುವ ‘ಗುರು ಶಿಷ್ಯರು’ ಸಿನಿಮಾ ಟ್ರೈಲರ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಿಲೀಸ್ ಆಗಿರುವ ಈ ಟ್ರೈಲರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದಿದ್ದು, ನೋಡುಗರಿಂದ ಸಾಕಷ್ಟು ಲೈಕ್ಸ್ ದೊರೆತಿವೆ.
ಸ್ಪೋರ್ಟ್ಸ್ ಡ್ರಾಮಾ ಆಧಾರಿತ ಈ ಚಿತ್ರದಲ್ಲಿ ಶರಣ್ ಖೋ ಖೋ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಶರಣ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ಜಡೇಶ ಕೆ ಹಂಪಿ ನಿರ್ದೇಶಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಲಡ್ಡು ಸಿನಿಮಾಸ್ ಬ್ಯಾನರ್ ನಡಿ ಶರಣ್ ಹಾಗೂ ತರುಣ್ ಸುಧೀರ್ ‘ಗುರು ಶಿಷ್ಯರು’ ಸಿನಿಮಾ ನಿರ್ಮಾಣ ಮಾಡಿದ್ದಾರೆ.