ಶಬರಿಮಲೆಗೆ ತೆರಳುವ ಯಾತ್ರಿಕರಿಗೆ ರೈಲು, ವಿಮಾನ ಹಾಗೂ ರಸ್ತೆ ಮಾರ್ಗದ ಮಾಹಿತಿ ಇಲ್ಲಿದೆ.
ರೈಲ್ವೆಮಾರ್ಗ:
ತೀರ್ಥಯಾತ್ರಿಕರು ರೈಲ್ವೆ ಪ್ರಯಾಣದ ಮೂಲಕ ಹೋಗುವುದಾದರೆ ಕೊಟ್ಟಾಯಂ ಅಥವಾ ಚೆಂಗನ್ನೂರಿಗೆ ರೈಲಿನಲ್ಲಿ ಹೋಗಬಹುದು. ಅಲ್ಲಿಂದ ರಸ್ತೆಯ ಮೂಲಕ ಪಂಬೆಗೆ ತಲಪಬಹುದು.
ವಿಮಾನ ಮಾರ್ಗ:
ಕೊಚ್ಚಿಯಲ್ಲಿಯೋ ತಿರುವನಂತಪುರದಲ್ಲಿಯೇ ವಿಮಾನದಿಂದಿಳಿದು ಅಲ್ಲಿಂದ ರಸ್ತೆಯಲ್ಲಿ ಪಂಬೆಗೆ ತಲಪಬಹುದಾಗಿದೆ.
ರಸ್ತೆ ಮೂಲಕ:
ಶಬರಿಮಲೆ ತೀರ್ಥಯಾತ್ರಿಕರಿಗೆ ಸೌಕರ್ಯವನ್ನು ಒದಗಿಸುವುದಕ್ಕಾಗಿ ಕೆ.ಎಸ್.ಆರ್.ಟಿ.ಸಿ. (ಕೇರಳ ರಸ್ತೆ ಸಾರಿಗೆ ಸಂಸ್ಥೆ) ಕೊಯಂಬತ್ತೂರು, ಪಳನಿ, ತೆಂಗಾಶಿ ಎಂಬ ಸ್ಥಳಗಳಿಗೆ ಪಂಬೆಯಿಂದ ಬಸ್ ಸರ್ವೀಸ್ ವ್ಯವಸ್ಥೆ ಮಾಡಿದೆ.
ಅಲ್ಲದೆ ಕರ್ನಾಟಕ, ತಮಿಳುನಾಡು ಸರಕಾರಗಳಿಗೂ ಪಂಬೆಯಲ್ಲಿ ಬಸ್ ಸರ್ವೀಸು ನಡೆಸಲು ಅನುಮತಿ ನೀಡಲಾಗಿದೆ. ಪಂಬೆಯಿಂದ ನೀಲಕ್ಕಲ್ಗೆ ಸರಣಿ ಸರ್ವೀಸ್ ನಡೆಸಲೂ ವ್ಯವಸ್ಥೆ ಮಾಡಲಾಗಿದೆ.