ಧಾರ್ಮಿಕ ಕ್ಷೇತ್ರಗಳಾದ ಶಬರಿಮಲೆ, ಮಂತ್ರಾಲಯ ಹಾಗೂ ಪಂಡರಾಪುರಕ್ಕೆ ತೆರಳುವ ಕರ್ನಾಟಕದ ಭಕ್ತರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ.
ಈ ಪುಣ್ಯಕ್ಷೇತ್ರಗಳಲ್ಲಿ ಕರ್ನಾಟಕ ಛತ್ರ ನಿರ್ಮಾಣ ಮಾಡಲು ರಾಜ್ಯ ಸರ್ಕಾರ 12 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದೆ.
ಈ ಪೈಕಿ ಶಬರಿಮಲೆಯಲ್ಲಿ ನಿರ್ಮಾಣವಾಗುವ ಛತ್ರಕ್ಕೆ 5 ಕೋಟಿ ರೂಪಾಯಿ, ಮಂತ್ರಾಲಯದಲ್ಲಿ ನಿರ್ಮಾಣವಾಗುವ ಛತ್ರಕ್ಕೆ 4 ಕೋಟಿ ರೂಪಾಯಿ ಹಾಗೂ ಪಂಡರಾಪುರಕ್ಕೆ 3 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡಲಾಗುತ್ತದೆ.