ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಲಕ್ಷಕ್ಕೂ ಅಧಿಕ ಭಕ್ತರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಆದರೆ ದಿನವೊಂದಕ್ಕೆ 85,000 ಭಕ್ತರನ್ನು ಮಾತ್ರವೇ ಕ್ಷೇತ್ರದಲ್ಲಿ ನಿರ್ವಹಿಸಲು ಸಾಧ್ಯ ಎಂದು ಪೊಲೀಸ್ ಭದ್ರತಾ ಉಸ್ತುವಾರಿ ಅಧಿಕಾರಿ ಸರ್ಕಾರದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಅಲ್ಲದೆ 18 ಪವಿತ್ರ ಮೆಟ್ಟಿಲುಗಳ ಮೇಲೆ ಒಂದು ನಿಮಿಷಕ್ಕೆ ಗರಿಷ್ಠ 65 ರಿಂದ 80 ಭಕ್ತರು ಮಾತ್ರವೇ ಏರಲು ಸಾಧ್ಯವಿದ್ದು, ಹೀಗಾಗಿ ದಿನನಿತ್ಯ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು 90,000 ದೊಳಗೆ ಸೀಮಿತಗೊಳಿಸುವಂತೆ ಆಡಳಿತ ಮಂಡಳಿಗೆ ಪೊಲೀಸರು ಸೂಚಿಸಿದ್ದರು.
ಹೀಗಾಗಿ ನಿತ್ಯ ದರ್ಶನ ಸಮಯವನ್ನು ಒಂದು ಗಂಟೆಗಳ ಕಾಲ ಹೆಚ್ಚಿಸುವ ಕುರಿತಂತೆ ಚಿಂತನೆ ನಡೆಸಲಾಗುತ್ತಿದ್ದು, ಕೇರಳ ಹೈಕೋರ್ಟ್ ಸಹ ಈ ಕುರಿತಂತೆ ಸಲಹೆ ನೀಡಿದೆ. ಸದ್ಯದಲ್ಲೇ ಈ ಕುರಿತಂತೆ ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.