![](https://kannadadunia.com/wp-content/uploads/2022/11/sddfsf_5e47e192c395c.jpg)
ಶನಿ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದಾನೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.
ಶನಿ ಕೆಟ್ಟ ದೃಷ್ಟಿಗೆ ಒಳಗಾದವರು ಕಠಿಣ ಸ್ವಭಾವ ಹಾಗೂ ಗುಣದಿಂದ ಕೂಡಿರುತ್ತಾರೆ. ವ್ಯಕ್ತಿ ಕೂದಲು ಗಡುಸಾಗಿರುತ್ತದೆ. ವ್ಯಕ್ತಿ ಅಸಡ್ಡೆಯಿಂದ ವರ್ತಿಸುತ್ತಾನೆ. ಆಲಸ್ಯ ಆತನನ್ನು ಕಾಡುತ್ತದೆ. ಯಾವುದೇ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ. ಸಾಮಾನ್ಯವಾಗಿ ಜೀವನದಲ್ಲಿ ನಡೆಯುವ ದೊಡ್ಡ ಘಟನೆಯೊಂದು ಜೀವನದ ಗತಿಯನ್ನು ಬದಲಿಸುತ್ತದೆ.
ಜೀವನದಲ್ಲಿ ತಪ್ಪು ಹೆಜ್ಜೆಯಿಡಲು ಶುರು ಮಾಡುತ್ತಾರೆ. ಹಂತ, ಹಂತದಲ್ಲೂ ಹೋರಾಟ ಅನಿವಾರ್ಯವಾಗುತ್ತದೆ. ಒಂಟಿತನ ಕಾಡಲು ಶುರುವಾಗುತ್ತದೆ.
ಶನಿ ಕೃಪಾಕಟಾಕ್ಷಕ್ಕೆ ಒಳಗಾದವನನ್ನು ಪತ್ತೆ ಹಚ್ಚುವುದು ಸುಲಭ.
ಎತ್ತರ ಹಾಗೂ ತೆಳ್ಳಗಿನ ವ್ಯಕ್ತಿ ಮೇಲೆ ಶನಿ ಕೃಪೆಯಿರುತ್ತದೆ. ಕೂದಲು ದಟ್ಟವಾಗಿರುತ್ತದೆ. ಜೀವನದಲ್ಲಿ ಶಿಸ್ತಿರುತ್ತದೆ. ಕೆಲಸಕ್ಕೆ ಹೆಚ್ಚು ಆದ್ಯತೆ ನೀಡುತ್ತಾನೆ. ಶ್ರಮ ಜೀವಿಯಾಗಿರುತ್ತಾನೆ. ಜೀವನದ ಮಧ್ಯಭಾಗದಲ್ಲಿ ಆಧ್ಯಾತ್ಮಕ್ಕೆ ಹೆಚ್ಚು ಒಲವು ತೋರಿಸುತ್ತಾನೆ. ತಡವಾಗಿಯಾದ್ರೂ ಆರ್ಥಿಕ ಲಾಭವಾಗುತ್ತದೆ.
ಮುಂದಿನ ದಿನಗಳಲ್ಲಿ ಶನಿ ಪ್ರಭಾವ ಹೆಚ್ಚಿರುತ್ತವೆ ಎಂಬುದನ್ನು ಇದ್ರ ಮೂಲಕ ತಿಳಿಯಬಹುದು:
ಮನೆಯಲ್ಲಿ ಗಲಾಟೆ ನಡೆಯುತ್ತಿರುತ್ತದೆ. ಕಾರಣವಿಲ್ಲದೆ ಗಾಯಗಳಾಗುತ್ತವೆ. ಮೂಳೆಗಳಲ್ಲಿ ನೋವು ಶುರುವಾಗುತ್ತದೆ. ಕೂದಲು ಅವಶ್ಯಕತೆಗಿಂತ ಹೆಚ್ಚು ಉದುರುತ್ತದೆ.
ಶನಿಯ ಕೃಪೆಗೆ ಪಾತ್ರರಾಗಬಯಸುವವರು ತಡ ರಾತ್ರಿಯವರೆಗೆ ಎದ್ದಿರುವುದು, ಬೆಳಿಗ್ಗೆ ತಡವಾಗಿ ಏಳುವ ಪದ್ಧತಿ ಬಿಡಬೇಕು. ನಡವಳಿಕೆ, ಆಹಾರ ಪದ್ಧತಿಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಧರ್ಮವನ್ನು ಪಾಲಿಸಬೇಕು. ಶಿವ, ಶ್ರೀಕೃಷ್ಣನ ಪೂಜೆ ಮಾಡಬೇಕು. ತಿಳಿ ನೀಲಿ ಬಟ್ಟೆ ಧರಿಸಬೇಕು.