ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವೂ ವಿಶೇಷತೆಯನ್ನು ಹೊಂದಿದೆ. ಸೋಮವಾರದಿಂದ ಭಾನುವಾರದವರೆಗೆ ಪ್ರತಿದಿನ ಒಂದೊಂದು ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲ ದಿನಕ್ಕಿಂತ ಶನಿವಾರ ವಿಶೇಷವಾಗಿರುತ್ತದೆ. ಈ ದಿನ ಮಾಡಿದ ಆರಾಧನೆ ಹೆಚ್ಚು ಫಲ ನೀಡುತ್ತದೆ ಎಂದು ನಂಬಲಾಗಿದೆ.
ಶನಿವಾರ ಶನಿದೇವರು ಹಾಗೂ ಹನುಮಂತನ ಆರಾಧನೆ ಮಾಡುವುದು ಶುಭಕರ. ಶನಿವಾರ ಹನುಮಾನ್ ಚಾಲೀಸ್ ಓದುವ ವ್ಯಕ್ತಿ ಜೀವನ ಹಸನಾಗಿರುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಶನಿವಾರ ಸಂಜೆ 11 ಬಾರಿ ಹನುಮಾನ್ ಚಾಲೀಸ್ ಪಠಣ ಮಾಡಬೇಕು.
ದೀಪಾವಳಿಗೆ ಬಿಡಿಸಿ ಸ್ಪೆಷಲ್ ʼರಂಗೋಲಿʼ
ಮನಸ್ಸಿನಲ್ಲಿರುವ ಬಯಕೆ ಈಡೇರಬೇಕಾದ್ರೆ ಶನಿವಾರ ಸಂಜೆ ರೊಟ್ಟಿಯನ್ನು ಕಪ್ಪು ನಾಯಿ ಅಥವಾ ದನಕ್ಕೆ ನೀಡಿ. ಹೀಗೆ ಮಾಡಿದ್ರೆ ನಿಮ್ಮೆಲ್ಲ ಇಚ್ಛೆ ಈಡೇರುತ್ತದೆ.
ಶಾಸ್ತ್ರದ ಪ್ರಕಾರ ಇರುವೆ ಅಥವಾ ಮೀನಿಗೆ ಗೋದಿ ಹಿಟ್ಟನ್ನು ನೀಡುವುದು ಪುಣ್ಯವೆಂದು ಪರಿಗಣಿಸಲಾಗಿದೆ. ಶನಿವಾರ ಇರುವೆ ಅಥವಾ ಮೀನಿಗೆ ಗೋದಿ ಹಿಟ್ಟನ್ನು ತಿನ್ನಲು ನೀಡಬೇಕು.