
ಶನಿವಾರ ಮೊಸರು ಹಾಗೂ ಹಾಲಿನಿಂದ ದೂರವಿರಬೇಕು. ಬರಿ ಮೊಸರು ಮತ್ತು ಹಾಲಿನ ಸೇವನೆ ಮಾಡಬಾರದು. ಅನಿವಾರ್ಯವಾದ್ರೆ ಚಿಟಕಿ ಅರಿಶಿನ ಅಥವಾ ಬೆಲ್ಲವನ್ನು ಹಾಕಿ ಸೇವನೆ ಮಾಡಬೇಕು.
ಶನಿವಾರ ಉಪ್ಪಿನ ಕಾಯಿಯನ್ನು ತಿನ್ನಬಾರದು. ಮಾವಿನ ಕಾಯಿ ಉಪ್ಪಿನಕಾಯಿ ಸೇವನೆ ಮಾಡಿದ್ರೆ ಶನಿದೇವ ಕೋಪಗೊಳ್ತಾನೆ.
ಶನಿ ದೇವರಿಗೆ ಕೆಂಪು ಮೆಣಸು ಪ್ರಿಯವಲ್ಲ. ಹಾಗಾಗಿ ಶನಿವಾರ ಕೆಂಪು ಮೆಣಸಿನ ಸೇವನೆ ಮಾಡಬಾರದು. ಶನಿವಾರ ಹಸಿರು ಅಥವಾ ಕಾಳು ಮೆಣಸಿನ ಸೇವನೆ ಮಾಡಬಹುದು.
ಶನಿವಾರ ಮದ್ಯಪಾನದಿಂದ ದೂರವಿರಬೇಕು. ಶನಿವಾರ ಮದ್ಯಪಾನ ಮಾಡಿದ್ರೆ ಶನಿ ಕೋಪಗೊಳ್ತಾನೆ. ಶನಿ ದೋಷಗಳನ್ನು ಎದುರಿಸಬೇಕಾಗುತ್ತದೆ.