ಖ್ಯಾತ ನಟ ಜ್ಯೂ. ಎನ್ಟಿಆರ್ ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ್ದು ಎನ್ಟಿಆರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಎನ್ಟಿಆರ್ ನಟನೆಯ ಬಾದ್ಷಾ ಸಿನಿಮಾ ಇದೇ ಶನಿವಾರದಂದು ಮರು ಬಿಡುಗಡೆಯಾಗಲಿದೆ, 2013 ಏಪ್ರಿಲ್ 5ರಂದು ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವುದಲ್ಲದೆ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಎನ್ಟಿಆರ್ ಅಭಿಮಾನಿಗಳು ಸಜ್ಜಾಗಿದ್ದಾರೆ.
ಶ್ರೀನು ವೈಟ್ಲ ನಿರ್ದೇಶನದ ಈ ಚಿತ್ರದಲ್ಲಿ ಎನ್‌ಟಿಆರ್ ಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದರು. ಪರಮೇಶ್ವರ ಆರ್ಟ್ಸ್ ಬ್ಯಾನರ್ ನಡಿ ಬಂದ್ಲ ಗಣೇಶ್ ನಿರ್ಮಾಣ ಮಾಡಿದ್ದ ಈ ಸಿನಿಮಾದಲ್ಲಿ ಸಾಯ್ ತಮನ್ ಸಂಗೀತ ಸಂಯೋಜನೆ ನೀಡಿದ್ದರು. ಬಾದ್ಷಾ ಸಿನಿಮಾ ಮತ್ತೊಮ್ಮೆ ರಿ ರಿಲೀಸ್ ಆಗುತ್ತಿದ್ದು, ಎನ್ಟಿಆರ್ ಅಭಿಮಾನಿಗಳು ಹಲವಾರು ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ