
ಈ ತಿಂಗಳ ಅವಧಿಯಲ್ಲಿ, ಇಸ್ಲಾಂ ಧರ್ಮದ ಅನುಯಾಯಿಗಳು ಉಪವಾಸ ಅಥವಾ ರೋಜಾವನ್ನು ಆಚರಿಸುತ್ತಾರೆ. ರಂಜಾನ್ ಸಮಯದಲ್ಲಿ ರೋಜಾವನ್ನು ಆಚರಿಸುವ ಜನರು ತಮ್ಮ ಮೊದಲ ಊಟ ಅಥವಾ ಸೆಹ್ರಿ ಮಾಡಲು ಬೆಳಿಗ್ಗೆ ಬೇಗನೆ ಎದ್ದೇಳುತ್ತಾರೆ. ಸಂಜೆ, ಅವರು ಇಫ್ತಾರ್ ಕೂಟದಲ್ಲಿ ಆಹಾರ ಸೇವಿಸುವುದರೊಂದಿಗೆ ಉಪವಾಸವನ್ನು ಮುರಿಯುತ್ತಾರೆ.
ಇದೀಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಇಫ್ತಾರ್ ಅನ್ನು ನೀಡಲಾಗಿದೆ. ಈ ಸಂಬಂಧ ಪ್ರಯಾಣಿಕರೊಬ್ಬರು ಶತಾಬ್ದಿ ರೈಲಿನಲ್ಲಿ ಇಫ್ತಾರ್ ಅನ್ನು ಹೇಗೆ ಬಡಿಸಿದರು ಎಂಬ ವಿವರಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೆಯ ಕಾಳಜಿಯು ಸಾಮಾಜಿಕ ಮಾಧ್ಯಮದಲ್ಲಿ ಜನರ ಹೃದಯವನ್ನು ಗೆದ್ದಿದೆ.
ಇಫ್ತಾರ್‌ಗಾಗಿ ಭಾರತೀಯ ರೈಲ್ವೆಗೆ ಧನ್ಯವಾದಗಳು. ಧನ್ಬಾದ್‌ನಲ್ಲಿ ಹೌರಾ ಶತಾಬ್ದಿ ಹತ್ತಿದ ತಕ್ಷಣ ಆಹಾರ ಸಿಕ್ಕಿದೆ. ತಾನು ಉಪವಾಸವಿರುವುದರಿಂದ ಸ್ವಲ್ಪ ತಡವಾಗಿ ಚಹಾ ತರಲು ಪ್ಯಾಂಟ್ರಿ ವ್ಯಕ್ತಿ ಬಳಿ ವಿನಂತಿಸಿದೆ. ಅವರು ತಾವು ರೋಜಾದಲ್ಲಿದ್ದೀರಾ ಎಂದು ಹೇಳಿದ್ದಾರೆ. ಪ್ರಯಾಣಿಕ ಹೌದೆಂದು ತಲೆಯಾಡಿಸಿದಾಗ, ಮತ್ತೊಬ್ಬರು ಇಫ್ತಾರ್ ಸಹಿತ ಬಂದಿದ್ದಾರೆ ಎಂದು ಟ್ವಿಟರ್ ಬಳಕೆದಾರ ಶಹನವಾಜ್ ಅಖ್ತರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಊಟದ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.